ಬಂಟ್ವಾಳ : ಸಿಂಡಿಕೇಟ್ ಬ್ಯಾಂಕ್ ಪುಂಜಾಲಕಟ್ಟೆ ಶಾಖೆಯಲ್ಲಿ ಗ್ರಾಹಕರ ಸಮಾವೇಶ ಜು.25ರಂದು ಜರಗಿತು.
ಬ್ಯಾಂಕ್ನ ಮಂಗಳೂರು ಪ್ರಾದೇಶಿಕ ಕಛೇರಿಯ ಉಪ ಮಹಾಪ್ರಬಂಧಕ ನರೇಂದ್ರನಾಥ ಕಾಮತ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬ್ಯಾಂಕ್ನಿಂದ ದೊರಕುವ ವಿವಿಧ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಹೊಂದಬಹುದು ಎಂದು ಹೇಳಿದರು.

ಕೇಂದ್ರ ಸರಕಾರದ ನೂತನ ಯೋಜನೆಗಳಾದ ಅಪಘಾತ ವಿಮೆ, ಆರೋಗ್ಯ ವಿಮೆ, ಪಿಂಚಣಿ ಯೋಜನೆಗಳ ಬಗ್ಗೆ ಈ ಸಂದರ್ಭದಲ್ಲಿ ಅವರು ಮಾಹಿತಿ ನೀಡಿದರು. ಪ್ರಗತಿಪರ ಕೃಷಿಕ, ಬಂಟ್ವಾಳ ತಾ.ಪಂ.ಮಾಜಿ ಅಧ್ಯಕ್ಷ ಸತೀಶ್ಚಂದ್ರ ಕೆ.ಎ., ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ , ಉದ್ಯಮಿ ಸಿಲ್ವೆಸ್ಟರ್ ಪಿಂಟೋ, ಸ್ವರ್ಣೋದ್ಯಮಿಗಳಾದ ಕೆ.ಲೋಕೇಶ ಆಚಾರ್ಯ, ಪ್ರಶಾಂತ್ ಬಾಳಿಗ ಅವರು ಮುಖ್ಯ ಅತಿಥಿಗಳಾಗಿದ್ದರು. ಶಾಖಾ ಸಿಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು.
ಶಾಖಾ ಸಿಬಂದಿ ಪ್ರವೀಣ್ ರೋಡ್ರಿಗಸ್ ಅವರು ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಾಖಾ ಪ್ರಬಂಧಕ ಹರೀಶ್ಕುಮಾರ್ ಪ್ರಸ್ತಾವಿಸಿದರು. ಸಿಬಂದಿ ಈಶ್ವರ ನಾಯ್ಕ ವಂದಿಸಿದರು.
