ಮೋಟಾರ್ ಏಂಡ್ ಜನರಲ್ ಮಜ್ದೂರ್ ಸಂಘ (ರಿ) ಬಿ ಎಂ ಎಸ್ ಇದರ 60 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ವಿಟ್ಲದ ಬಿಎಂಎಸ್ ರಿಕ್ಷಾ ಚಾಲಕ ಮಾಲಕ ಸಂಘದವರಿಂದ ವಾಹನ ಜಾತಾ ಕಾರ್ಯಕ್ರಮವು ವಿಟ್ಲದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಈ ಜಾತಾಕ್ಕೆ ಸಂಘದ ಅಧ್ಯಕ್ಷ ವಿ ಎಸ್ ಪ್ರಸಾದ್ ಕೂಜಪ್ಪಾಡಿ ಚಾಲನೆ ನೀಡಿದರು. ಸಂಘದ ಗೌರವಾಧ್ಯಕ್ಷ ಹರೀಶ ಕಲ್ಲಕಟ್ಟ, ಉಪಾಧ್ಯಕ್ಷ ಅಚ್ಚುತ ಕುಂಡಡ್ಕ, ಕಾರ್ಯದರ್ಶಿ ವೆಂಕಪ್ಪ ಪಡಿಬಾಗಿಲು, ಜೊತೆ ಕಾರ್ಯದರ್ಶಿ ರಜಾಕ್ ಕುರುಂಬಳ, ಸಂಘಟನಾ ಕಾರ್ಯದರ್ಶಿ ರವೀಶ್ ಕೂಡೂರು, ಕೋಶಾಧಿಕಾರಿ ಹರೀಶ ಆಲಂಗಾರು ಹಾಗೂ ಎಲ್ಲಾ ಸದಸ್ಯರು ಜಾತಾದಲ್ಲು ಭಾಗವಹಿಸಿದ್ದರು

