ವಾಮಂಜೂರು: ಬದುಕು ಹಸನಾಗಲು ಯೋಗ ಜೀವನದ ಚಿಂತನೆ ಅಗತ್ಯ. ಭೋಗ ಜೀವನದಿಂದ ದೇಹ ರೋಗಕ್ಕೆ ಈಡಾಗುತ್ತದೆ. ಸಾತ್ವಿಕ ಆಹಾರ ಸೇವಿಸುವುದರಿಂದ ಮನಸ್ಸು ದೇಹ ಹಗುರವಾಗುತ್ತದೆ. ಯೋಗ ಮಾರ್ಗದ ಮೂಲಕ ಸಾಧನೆಗೆ ಉತ್ತಮವಾಗುತ್ತದೆ. ಯೋಗವೆಂಬೂದು ತಪಸ್ಸು, ತಪಸ್ಸನ್ನು ಸಮ ಚಿತ್ತದಿಂದ ಅಭ್ಯಾಸ ಮಾಡಿದಾಗ ಸಿದ್ಧಿ ಪ್ರಾಪ್ತಿಯಾಗುತ್ತದೆ. ಮಕ್ಕಳಿಗೆ ಎಳವೆಯಲ್ಲೇ ಯೋಗಭ್ಯಾಸವನ್ನು ಮಾಡಿಸುವುದರಿಂದ ಸುಸಂಸ್ಕ್ರತ ಮತ್ತು ಸದೃಡರನ್ನಾಗಿಸಿ ಯೋಗ್ಯ ನಾಗರೀಕರನ್ನಾಗಿಸಬಹುದು ಎಂದು ಹೇಳಿದರು.

ಅವರು ಶಾಂತಿವನ ಟ್ರಸ್ಟ್ (ರಿ) ಶ್ರೀ ಕ್ಷೇತ್ರ ಧರ್ಮಸ್ಥಳ ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ ಮಂಗಳೂರು ಇವರ ಸಹಯೋಗದಲ್ಲಿ ಎಸ್.ಡಿ.ಎಂ ಮಂಗಳಜ್ಯೋತಿ ಸಭಾಂಗಣ ವಾಮಂಜೂರು ಇಲ್ಲಿ ಉಡುಪಿ ಮತ್ತು ದ.ಕ ಜಿಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಯೋಗ ತರಬೇತಿ ಪಡೆದ ಯೋಗ ಶಿಕ್ಷಕರ ವಿಶೇಷ ಪುನಶ್ಚೇತನ ಶಿಬಿರವನ್ನು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರರವರು ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ವಿದ್ಯಾಂಗ ಉಪನಿರ್ದೇಶಕರಾದ ಶ್ರೀ ವಾಲ್ಟರ್ ಎಚ್ ಡಿಮೆಲ್ಲೊ. ಶ್ರೀಪುರುಷೋತ್ತಮ, ರಾಷ್ಟ್ರೋತ್ತಾನ ಪರಿಷತ್ ಬೆಂಗಳೂರಿನ ಶ್ರೀ ನಾಗೇಂದ್ರ ಕಾಮತ್, ಆಡಳಿತಾಧಿಕಾರಿ ಶ್ರೀ ಗಣೇಶ್ ಭಟ್ ವಿ. ಮುಖ್ಯೋಪಾಧ್ಯಾಯರಾದ ಅಶೋಕ್ ಕುಮಾರ್ ಶೆಟ್ಟಿ ಸಂಪನ್ಮೂಲ ವ್ಯಕ್ತಿ ಸುರೇಶ್ ಮಂಗಳೂರು ಉಪಸ್ಥಿತರಿದ್ದರು. ಮಂಗಳಜ್ಯೋತಿ ಶಾಲಾ ಸಂಚಾಲಕರಾದ ಪ್ರೊ. ಎ ರಾಜೇಂದ್ರ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು.
ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಶ್ರೀ ಸೀತಾರಾಮ ತೋಳಾಡಿತ್ತಾಯ ಸ್ವಾಗತಿಸಿದರು, ಯೋಗ ನಿರ್ದೇಶಕರಾದ ಶ್ರೀ ಶಶಿಕಾಂತ್ ಜೈನ್ ವಂದಿಸಿದರು. ಜಿಲ್ಲಾ ಯೋಗ ಸಂಘಟಕರಾದ ಶೇಖರ್ ಕಡ್ತಲ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ ದ.ಕ ಜಿಲ್ಲಾ ಸುಮಾರು 120 ಯೋಗ ಶಿಕ್ಷಕರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
