ಮೂಡುಬಿದರೆ: ಸಿದ್ದಕಟ್ಟೆ ಸೈಂಟ್ ಪಾಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಆಳ್ವಾಸ್ ನರ್ಸಿಂಗ್ ಕಾಲೇಜಿನ ಎನ್ಎಸ್ಎಸ್ ಶಿಬಿರದಲ್ಲಿ `ಕೆಸರ್ ಒಂಜಿ ದಿನ’ ಕಾರ್ಯಕ್ರಮ ನಡೆಯಿತು.
mbd_july21_11  (2)
ಸಿದ್ಧಕಟ್ಟೆ ಜಯಶಾಂತಿ ಮಹಲ್ ಕುಟುಂಬಸ್ಥರ ಗದ್ದೆಯಲ್ಲಿ ಕೆಸರ್ ಒಂಜಿ ದಿನ ಗದ್ದೆಯಲ್ಲಿ ಆಟೋಟಾ ಸ್ಪಧರ್ೆಗಳು ನಡೆಯಿತು.
ಶಿಬಿರದಲ್ಲಿ ಆರೋಗ್ಯ ಸಮೀಕ್ಷೆ, ಎ.ಜೆ ದಂತ ಕಾಲೇಜು ವತಿಯಿಂದ ದಂತ ಚಿಕಿತ್ಸಾ ಶಿಬಿರ, ಆಳ್ವಾಸ್ ಕಾಲೇಜ್ ಆಫ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ವತಿಯಿಂದ ಶಾಲಾ ಮಕ್ಕಳಿಗೆ ರಕ್ತ ಉಚಿತ ವರ್ಗೀಕರಣ ನಡೆಯಿತು. ಶಿಬಿರಾರ್ಥಿ ಸಂತೋಷ್ ಶೆಟ್ಟಿ ನಾಯಕತ್ವ ಕುರಿತು, ಡಾ.ರವೀಂದ್ರನಾತ್ ಐತಾಳ್ `ಹಾವು ನಾವು ಮತ್ತು ಪರಿಸರ’ ಬಗ್ಗೆ, ಸುಧೀಂದ್ರ ಅವರು ಮಾನವೀಯ ಸಂಬಂಧಗಳ ಬಗ್ಗೆ, ವಕೀಲೆ ಶ್ವೇತಾ ಜೈನ್ ಮಾಹಿತಿ ಹಕ್ಕು ಕಾಯಿದೆ, ಡಾ.ವಿನಯಚಂದ್ರ ಶೆಟ್ಟಿ ಭಾರತೀಯ ವೈದ್ಯ ಪದ್ಧತಿ, ಪ್ರಭಾತ್ ಕುಮಾರ್ ಶಿಕ್ಷಣ ಮತ್ತು ಸಮಾಜ, ನಿತೇಶ್ ಬಲ್ಲಾಳ್ ಸಮಾಜಸೇವೆ, ಡಾ.ಕೃಷ್ಣ ಮೋಹನ್ ಪ್ರಭು ಪ್ರಥಮ ಚಿಕಿತ್ಸೆ ಬಗ್ಗೆ ಉಪನ್ಯಾಸ ನೀಡಿದರು.
ಸಮಾರೋಪ ಸಮಾರಂಭ:
ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ ಯತಿಕುಮಾರ್ ಸ್ವಾಮೊ ಗೌಡ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಡಿ.ಜೆ.ವಿ.ವಿ ಸಂಘದ ಕಾರ್ಯದರ್ಶಿ ಅಭಿಜಿತ್.ಎಂ ಸಮಾರೋಪ ಭಾಷಣ ಮಾಡಿದರು.
ಕೆರೆಬಳಿ ಕ್ಲಸ್ಟರ್ನ ಸಿಆರ್ಪಿ ಡಿ.ಕುಮಾರ್, ಮುಖ್ಯ ಶಿಕ್ಷಕಿ ರೀಟಾ ತಾವ್ರೋ, ಸಿಸ್ಟರ್ ಲೀನಾ ಮುಖ್ಯ ಅತಿಥಿಯಾಗಿದ್ದರು. ಶಾಲೆಗೆ ನೀರು ಶುದ್ಧಿ ಕಾರಣ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು.
ಶಿಭಿರಾಧಿಕಾರಿ ಧಿರೇಂದ್ರ ಜೈನ್ ಸ್ವಾಗತಿಸಿದರು. ಸಹ ಶಿಬಿರಾಧಿಕಾರಿ ಲತಾ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಕುಮಾರ್ ವಂದಿಸಿದರು.
…….

By suddi9

Leave a Reply

Your email address will not be published. Required fields are marked *