ಮೂಡುಬಿದರೆ : ಮಾರೂರು ಗ್ರಾಮದ ಶಾಲೆಯ ಬಳಿಯ ದರ್ಖಾಸು ಮನೆಯ ಸುಬ್ಬ (55ವರ್ಷ) ಎಂಬವರು ಭಾನುವಾರ ನಾಪತ್ತೆಯಾಗಿದ್ದಾರೆ. ಸುಬ್ಬ ಅವರು ಮಾರೂರಿನಲ್ಲಿರುವ ಅಳಿಯನ ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ವಾಸವಾಗಿದ್ದರು.

ಭಾನುವಾರ ರಾತ್ರಿ ಊಟ ಮಾಡಿ ಮಲಗಿದ್ದು ಬೆಳಿಗ್ಗೆ ನಾಪತ್ತೆಯಾಗಿದ್ದಾರೆ.5.8ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ತಿಳಿ ನೀಲಿ ಬಣ್ಣದ ಟೀಶರ್ಟ್ ಮತ್ತು ಬಿಳಿಪಂಚೆ ಧರಿಸಿದ್ದಾರೆ. ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಮೂಡುಬಿದರೆ ಠಾಣೆಯನ್ನು ಸಂಪರ್ಕಿಸಬಹುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
