ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಆರಂಭಗೊಂಡ ದಿನವೇ ಭಾರತೀಯ ಜನತಾ ಪಕ್ಷ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಿದರಲ್ಲಿ ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಸೋಮವಾರ ನಡೆದ ಸಮಾರಂಭದಲ್ಲಿ ಬಿಜೆಪಿ ಮುಖಂಡ ಮುರಳಿ ಮನೋಹರ ಜೋಷಿಯವರು ಪ್ರಣಾಳಿಕೆಯ ವಿವರವನ್ನ ಓದಿದ್ದಾರೆ. ಈ ಪ್ರಣಾಳಿಕೆಯ ಮುಖ್ಯಾಂಶಗಳು ಇಲ್ಲಿವೆ..

* ದೇಶದ ಪ್ರತಿಯೊಬ್ಬರಿಗೂ ಒಂದೇ ಕಾನೂನು; ಸಮಾನ ನಾಗರಿಕ ಸಂಹಿತೆ ಜಾರಿ
* ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ
* ಅತ್ಯಾಧುನಿಕ ಮೂಲಭೂತ ಸೌಲಭ್ಯ
* ಎಲ್ಲಾ ಮನೆ, ಕೃಷಿಭೂಮಿ ಮತ್ತು ಕಾರ್ಖಾನೆಗಳಿಗೆ ನೀರು ಪೂರೈಕೆ
* ಭಯೋತ್ಪಾದನೆ, ಉಗ್ರವಾದ ಮತ್ತು ಅಪರಾಧ ಕೃತ್ಯಗಳ ವಿರುದ್ಧ ತೀರಾ ಕಟ್ಟುನಿಟ್ಟಿನ ಕ್ರಮ
* ಬೆಲೆ ಹೆಚ್ಚಳ ಸಮಸ್ಯೆಯ ನಿಗ್ರಹ
* ಉದ್ಯೋಗ ಸೃಷ್ಟಿ ಹಾಗೂ ಉದ್ಯಮಶೀಲತೆಗೆ ಉತ್ತೇಜನ
* ಭ್ರಷ್ಟಾಚಾರ ವಿರುದ್ಧ ಹೊಸ ಕಾಯ್ದೆ
* ವಿದೇಶಗಳಿಂದ ಭಾರತೀಯರ ಕಪ್ಪು ಹಣ ಹಿಂದಕ್ಕೆ
* ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಸುಧಾರಣೆ
* ರಾಜ್ಯಗಳಿಗೆ ಹೆಚ್ಚಿನ ಅಧಿಕಾರ
* ಪಾರದರ್ಶಕ ಮತ್ತು ಪರಿಣಾಮಕಾರಿ ಆಡಳಿತ
* ಇ-ಆಡಳಿತಕ್ಕೆ ಆದ್ಯತೆ
* ನ್ಯಾಯಾಂಗ, ಪೊಲೀಸ್, ಚುನಾವಣಾ ಸುಧಾರಣೆ
* ಬಡವರ ಮತ್ತು ಶೋಷಿತರ ಉದ್ಧಾರ
* ಬಡವರು ಮತ್ತು ಸಿರಿವಂತರ ನಡುವಿನ ಅಂತರ ತಗ್ಗಿಸುವುದು
* ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಮತ್ತಿತರ ದುರ್ಬಲ ವರ್ಗದವರಿಗೆ ಹೆಚ್ಚಿನ ಬಲ ಮತ್ತು ಸಾಮಾಜಿಕ ನ್ಯಾಯ
* ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ
* ಗ್ರಾಮೀಣ ಭಾಗಕ್ಕೆ ಹೆಚ್ಚಿನ ಆದ್ಯತೆ
* ದೇಶದ ಭವಿಷ್ಯವಾದ ಮಕ್ಕಳ ಮೇಲೆ ಹೆಚ್ಚಿನ ಗಮನ
* ಹಿರಿಯ ನಾಗರಿಕರಿಗೆ ಭದ್ರತೆ
* ಕ್ರೀಡೆಗೆ ಉತ್ತೇಜನ
* ಶಿಕ್ಷಣ ವ್ಯವಸ್ಥೆಯ ಸುಧಾರಣೆ – ಶಾಲಾ ಶಿಕ್ಷಣ, ವೃತ್ತಿಪರ ಹಾಗೂ ಉನ್ನತ ಶಿಕ್ಷಣಕ್ಕೆ ಉತ್ತೇಜನ
* ವೈದ್ಯಕೀಯ ಕ್ಷೇತ್ರದಲ್ಲಿ ಸುಧಾರಣೆ – ಒಳ್ಳೆಯ ಗುಣಮಟ್ಟದಲ್ಲಿ ಹಾಗೂ ಕಡಿಮೆ ವೆಚ್ಚಲ್ಲಿ ವೈದ್ಯಕೀಯ ಸೇವೆ ಲಭ್ಯತೆಗೆ ಗಮನ
