ಸುದ್ದಿ9 ಪೊಳಲಿ: ಇತಿಹಾಶ ಪ್ರಸಿದ್ದ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಜು.8 ರಂದು ಬುಧವಾರ ಪ್ರಾರಂಭಗೊಂಡ ಭಜನೆ ಸಪ್ತಾಹವು ನಿರಂತರ 7 ದಿನದ 168 ಗಂಟೆಗಳ ಸಮಯದಲ್ಲಿ ದಕ್ಷಿಣ ಕನ್ನಡ, ಉಡುಪಿ, ಮಹಾರಾಷ್ಟ್ರ ಹಾಗೂ ವಿವಿಧ ಭಾಗದ ಭಜನಾ ಮಂಡಳಿಗಳು ಪಾಲ್ಗೊಂಡು ಭಜನಾ ಸಪ್ತಾಹದಲ್ಲಿ ಸಂಕೀರ್ತನೆಯನ್ನು ಹಾಡಿದರು. ಜು.15ರಂದು ಬುಧವಾರ ಬೆಳಗ್ಗೆ ಶ್ರೀರಾಜರಾಜೇಶ್ವರೀ ಭಜನಾ ಮಂಡಳಿಯವರಿಂದ ಭಜನಾ ಮಂಗಲೋತ್ಸವದೊಂದಿಗೆ ಸಂಪನ್ನಗೊಂಡಿತು.

ಪೊಳಲಿ ದೇವಳದ ಪ್ರ. ಅರ್ಚಕ ಪವಿತ್ರಪಾಣಿ ಮಾಧವ ಭಟ್, ಅರ್ಚಕರಾದ ನಾರಾಯಣ ಭಟ್, ಪರಮೇಶ್ವರ ಭಟ್ ಹಾಗೂ ಮಾಜಿ ಸಚಿವ ನಾಗರಾಜ ಶೆಟ್ಟಿ, ದೇವಳದ ಮೊಕ್ತೇಸರರಾದ ಯು.ತಾರಾನಾಥ ಆಳ್ವ, ಚೇರಾ ಸೂರ್ಯನಾರಾಯಣ ರಾವ್, ಕಾರ್ಯನಿರ್ವಹಣಾಧಿಕಾರಿ ಹರೀಶ್ಚಂದ್ರ, ಸೇಸಪ್ಪ ಕೋಟ್ಯಾನ್ ಪಚಿನಡ್ಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೇವ್ದಾಸ್ಶೆಟ್ಟಿ, ಬಂಟ್ವಾಳ ಎಪಿಎಂಸಿ ಉಪಾಧ್ಯಕ್ಷ ಅಮ್ಮುಂಜೆ ಸಂಪತ್ಕುಮಾರ್ ಶೆಟ್ಟಿ ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರವತಿ, ಉಪಾಧ್ಯಕ್ಷ ಪುಂಚಮೆ ಚಂದ್ರಶೇಖರ ರಾವ್, ಅಮ್ಮುಂಜೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ವಾಮನ ಆಚಾರ್ಯ, ಭದ್ರಕಾಳಿ ದೇವಸ್ಥಾನದ ರಮೇಶ್ ಬೆಂಜನಪದವು ಮತ್ತು ಹಲವಾರು ಭಜನಾಮಂಡಳಿಗಳ ಪ್ರಮುಖರು ಮಂಗಲೋತ್ಸವದಲ್ಲಿ ಪಾಲ್ಗೊಂಡಿದ್ದರು.
ಚಿತ್ರ 15ವಿಪಿ ಮಂಗಲೋತ್ಸವ






