ಬಂಟ್ವಾಳ: ಕಳೆದೊಂದು ವರ್ಷದಿಂದ ಮಾನಸಿಕ ಅಸ್ವಸ್ಥರಾಗಿ ಬಳಲುತ್ತಿದ್ದ ಮಹಿಳೋರ್ವರನ್ನು ಸ್ಥಳೀಯ ತಾಪಂ ಸದಸ್ಯರ ನೇತೃತ್ವದಲ್ಲಿ ಮಂಗಳವಾರ ಮಂಗಳೂರು, ದೇರಳಕಟ್ಟೆ ಜ.ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮಾನಸಿಕ ರೋಗಿಗಳ ವಿಭಾಗಕ್ಕೆ ಸೇರಿಸಲಾಯಿತು. ಕಾವಳಮೂಡೂರು ಗ್ರಾಮದ ಕಾಂದ್ರೋಡಿ, ಬಳ್ಳಿದಗುರಿ ನಿವಾಸಿ ದಿ.ರಾಮಣ್ಣ ನಾಯ್ಕ ಹಾಗೂ ಸುಂದರಿ ದಂಪತಿಯ ಮಗಳಾದ ಪುಷ್ಪಾವತಿ (38) ಎಂಬವರು ಕಳೆದ ವರ್ಷದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರು.

ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮನೆಗೆ ಭೇಟಿ ನೀಡಿದ ಸಂದರ್ಭ ಕೊಠಡಿಯೊಂದರಲ್ಲಿ ಕಟ್ಟಿ ಹಾಕಿದ ಸ್ಥಿತಿಯಲ್ಲಿದ್ದ ಮಹಿಳೆಯ ಬಗ್ಗೆ ಸ್ಥಳೀಯ ತಾಲೂಕು ಪಂಚಾಯಿತಿ ಸದಸ್ಯ ಪದ್ಮಶೇಖರ್ ಜೈನ್ ಅವರು ಗಮನಕ್ಕೆ ತಂದಿದ್ದರು. ತಕ್ಷಣ ಕಾರ್ಯಪ್ರವೃತ್ತಗೊಂಡ ಪದ್ಮಶೇಖರ್ ಜೈನ್ ಶನಿವಾರ ಪುಷ್ಪಾವತಿ ಮನೆಗೆ ಭೇಟಿ ನೀಡಿ ವಾಸ್ತವಾಂಶವನ್ನು ಪರಿಶೀಲನೆ ನಡೆಸಿದರು. ಸುಂದರಿ ಕುಟುಂಬ ಆಥರ್ಿಕವಾಗಿ ಹಿಂದುಳಿದಿದ್ದು, ಮಾನಸಿಕ ಶುಶ್ರೂಷೆ ಒದಗಿಸಲು ಅಸಾಧ್ಯವಾಗಿದ್ದರಿಂದ ಜ.ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದೆ ಎಂದು ಪದ್ಮಶೇಖರ್ ಜೈನ್ ತಿಳಿಸಿದ್ದಾರೆ. ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಮುಖ್ಯಸ್ಥ ಕೆ.ಕೆ.ಪೂಂಜ, ಕಾವಳಮೂಡುರು ಗ್ರಾಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ಅಂಚನ್, ಸ್ಥಳೀಯ ಅಂಗನವಾಡಿ ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.
