ಮೂಡುಬಿದರೆ: ಜುಲೈ13: ತೋಟಗಾರಿಕಾ ಇಲಾಖೆಯ ವತಿಯಿಂದ ಪಡುಮಾರ್ನಾಡು ಗ್ರಾ.ಪಂ. ಸಭಾಭವನದಲ್ಲಿ 2 ದಿನಗಳ ಕಾಲ ನಡೆದ ಜೇನು ಕೃಷಿ ತರಬೇತಿಯನ್ನು ತಾ.ಪಂ. ಅಧ್ಯಕ್ಷೆ ರಜನಿ ಉದ್ಘಾಟಿಸಿದರು.

ಪಡುಮಾರ್ನಾಡು ಗ್ರಾ.ಪಂ. ಅಧ್ಯಕ್ಷ ಶ್ರೀನಾಥ್ ಅಧ್ಯಕ್ಷತೆಯನ್ನು ವಹಿಸಿದ್ದರು.ಉಪಾಧ್ಯಕ್ಷೆ ಅರುಣ ಕುಮಾರಿ ಹೆಗ್ಡೆ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ಜಾನಕಿ, ಮಹಿಳ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಮೇಲ್ವಿಚಾರಕಿ ಶುಭಾ, ಪಿ.ಡಿ.ಒ. ಪ್ರಶಾಂತ್ ಶೆಟ್ಟಿ, ಸಹಾಯಕ ತೋಟಗಾರಿಕಾ ಅಧಿಕಾರಿ ಸುಕುಮಾರ ಹೆಗ್ಡೆ, ದ.ಕ. ಜೇನು ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ಟಿ.ಶ್ಯಾಮ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇಲಾಖಾಧಿಕಾರಿ ಬಾಲಕೃಷ್ಣ ಭಟ್ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.
…..
