ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ಕಳೆದ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿ ಪ್ರಜ್ವಲ್ ಗಟ್ಟಿ ಇವರಿಗೆ ಮರು ಮೌಲ್ಯಮಾಪನದಲ್ಲಿ 23 ಹೆಚ್ಚುವರಿ ಅಂಕ ದೊರೆತಿದೆ. ಈ ಹಿಂದೆ ಒಟ್ಟು 588 ಅಂಕಗಳು ಲಭಿಸಿದ್ದು, ಇದೀಗ ಮರು ಮೌಲ್ಯಮಾಪನದಿಂದ ಒಟ್ಟು 611 ಅಂಕ ಗಳಿಸುವ ಮೂಲಕ ಶೇ.98.08 ಫಲಿತಾಂಶ ದೊರೆತಿದೆ.

ಸಮಾಜ ವಿಜ್ಞಾನದಲ್ಲಿ 79 ಅಂಕಕ್ಕೆ ಬದಲಾಗಿ 95, ವಿಜ್ಞಾನದಲ್ಲಿ 92 ಅಂಕಕ್ಕೆ ಬದಲಾಗಿ 99 ಅಂಕ ದೊರೆತಿದ್ದು, ಆ ಮೂಲಕ ಶಾಲೆಗೆ ಪ್ರಥಮ ಸ್ಥಾನ ದೊರೆತಿದೆ ಎಂದು ಶಾಲಾ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
