ಸುದ್ದಿ9 ಕೈಕಂಬ: ಮಂಗಳೂರು ತಾಲೂಕಿನ ವಾಮಂಜೂರು ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವರ ಸಂಘದ 2015-17 ರ ನೂತನ ಪಧಾಧಿಕಾರಿಗಳ ಆಯ್ಕೆ ಜು.12 .ರಂದು ವಾಮಂಜೂರು ಗುರು ಮಂದಿರದಲ್ಲಿ ನಡೆಯಿತು. ಅಧ್ಯಕ್ಷರಾಗಿ ಮೋಹನ್ ದಾಸ್ ಬಂಗೇರಾ ಅವರು ಸರ್ವಾನುಮತದಿಂದ ಅಯ್ಕೆಯಾದರು.
ಉಪಾಧ್ಯಕ್ಷರಾಗಿ ಪುರುಷೋತ್ತಮ ಸಾಲಿಯಾನ್, ಪ್ರ. ಕಾರ್ಯದರ್ಶಿಯಾಗಿ ಕಾಂತಪ್ಪ ಪೂಜಾರಿ, ಲೆಕ್ಕ ಪರಿಶೋಧಕರಾಗಿ ರಾಜೀವ್ ಎನ್ ಕೊಳಕೆಬೈಲ್, ಕೋಶಾಧಿಕಾರಿಯಾಗಿ ಕುಸುಮಾಕರ ಅಮೀನ್ ಅವರು ಆಯ್ಕೆಯಾದರು. ಒಟ್ಟು 21 ಸದಸ್ಯರ ಅಯ್ಕೆಯನ್ನು ಈಶ್ವರ ಪೂಜಾರಿ, ಮತ್ತು ಗಂಗಾಧರ ಮಾಸ್ಟರ್ ನೆರವೇರಿಸಿದರು.




