ಬಂಟ್ವಾಳ: ತಡೆಗೋಡೆ ಕುಸಿದು ಮೃತಪಟ್ಟ ಬಾಲಕನ ಶಾಲೆ ಹಾಗೂ ಮನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಶನಿವಾರ ಭೇಟಿ ನೀಡಿದರು. ಎರಡನೇ ಭಾರಿ ಮನೆಮಂದಿಯನ್ನು ಭೇಟಿ ಮಾಡಿದ ಸಚಿವರು ಸಾಂತ್ವನ ಹೇಳಿದರು. ಪಾಕೃತಿಕ ವಿಕೋಪದಡಿ ಮುಖ್ಯಮಂತ್ರಿ ಪರಿಹಾರ ನಿಧಿಯಡಿ ಮಂಜೂರುಗೊಂಡ 4 ಲಕ್ಷ ರು. ಮೊತ್ತದ ಪರಿಹಾರ ಧನದ ಚೆಕನ್ನು ಸಚಿವರು ಈ ಸಂದರ್ಭ ಮನೆಮಂದಿಗೆ ಹಸ್ತಾಂತರಿಸಿದರು.

download (1)
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಯು.ಟಿ. ಖಾದರ್ ಚಿಕ್ಕ ಬಾಲಕನನನು ಕಳೆದುಕೊಂಡಿರುವ ಕುಟುಂಬಕ್ಕೆ ಧೈರ್ಯ ತುಂಬುವುದು ಸರ್ಕಾರದ ಕೆಲಸ. ಅದರಂತೆ ಪ್ರಾಕೃತಿಕ ವಿಕೋಪದಡಿ ಮುಖ್ಯಮಂತ್ರಿ ಪರಿಹಾರ ನಿಧಿಯ ಮೂಲಕ ತುರ್ತು  ನೆರವು ನೀಡಲಾಗಿದೆ ಎಂದರು. ಈ ಸಂದರ್ಭ ತಹಶೀಲ್ದಾರ್ ಪುರಂದರ ಹೆಗ್ಡೆ, ಜಿ.ಪಂ.ಮಾಜಿ ಸದಸ್ಯ ಉಮ್ಮಾರ್ ಫಾರೂಕ್, ತಾ.ಪಂ.ಸದಸ್ಯ ಆಸೀಪ್ ಇಕ್ಬಾಲ್. ಪದು ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷ ಶರೀಫ್, ಸದಸ್ಯರಾದ ಅಖ್ತರ್ ಹುಸೈನ್, ಎಫ್.ಎ.ಖಾದರ್, ಆಸೀರ್, ರಮ್ಲಾನ್, ಎಂ.ಕೆ.ಖಾದರ್, ದುರ್ಗೇಶ್ ಶೆಟ್ಟಿ, ಲತೀಫ್, ಝಾಹೀರ್, ಫೈಸಲ್, ಖಾದರ್ ಪಾವೂರು, ಇಕ್ಬಾಲ್ ಮಾರಿಪಳ್ಳ ಹಾಜರಿದ್ದರು.

By Suddi9

Leave a Reply

Your email address will not be published. Required fields are marked *