ಉತ್ತಮವಾದ ಆಂಗ್ಲಭಾಷಾ ಜ್ಞಾನ , ಕಂಪ್ಯೂಟರ್ ಅರಿವು ಮತ್ತು ಉತ್ತಮ ಸಂವಹನ ಕಲೆ ಇದ್ದಲ್ಲಿ ಕಲಾ ವಿಭಾಗದವರಿಗೂ ಸಾಕಷ್ಟು ಉದ್ಯೋಗಾವಕಾಶಗಳು ಇವೆ. ಸೀಮಿತವಾಗಿರುವ ಸರ್ಕಾರಿ ಕೆಲಸಗಳಿಗೆ ಕಾಯದೆ ಸ್ವ ಉದ್ಯೋಗಗಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.
ಇದಕ್ಕೆ ಬೇಕಾದ ತರಬೇತಿ ಕುಶಲತೆಗಳನ್ನು ಪಡೆದುಕೊಂಡರೆ ಕಲಾಪದವೀಧರರೂ ಪದವಿ ಗಳಿಸಿದ ಮರುಕ್ಷಣದಲ್ಲೇ ಉದ್ಯೋಗಿಗಳಾಗಬಹುದು.’ ಎಂದು ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ಉಪನ್ಯಾಸಕ ಜಾನ್ ಡಿ ಸೋಜ ವಿದ್ಯಾರ್ಥಿಗಳಿಗೆ ಹೇಳಿದರು. ಇವರು ವಿಟ್ಲದ ವಿಠಲ ವಿದ್ಯಾ ಸಂಘದ ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ “ಸಂಪನ್ನ” ಆಯೋಜಿಸಿದ `ಸ್ಕೋಪ್ 2015′ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದರು. ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಕಲಾ ವಿಭಾಗದವರ “ಶಿಕ್ಷಣ-ಉದ್ಯೋಗ ಅವಕಾಶಗಳು’ ಈ ಕುರಿತಂತೆ ನಡೆದ ಈ ಕಾರ್ಯಕ್ರಮದಲ್ಲಿ “ಸಂಪನ್ನ”ದ ಸಂಯೋಜಕ ಕನ್ನಡ ಉಪನ್ಯಾಸಕ ಯು ಎಸ್ ವಿಶ್ವೇಶ್ವರ ಭಟ್ ಸ್ವಾಗತ ಮತ್ತು ಪ್ರಸ್ತಾವಿಕವಾಗಿ ಮಾತಾಡಿದರು. ಸಂವಾದ ರೂಪದಲ್ಲಿ ನಡೆದ ಈ ಕಾರ್ಯಕ್ರಮವನ್ನು ರಾಜ್ಯಶಾಸ್ತ್ರ ಉಪನ್ಯಾಸಕ ಶರತ್ಚಂದ್ರ ಶೆಟ್ಟಿ ಸಂಯೋಜಿಸಿ ವಂದಿಸಿದರು
