ಬಂಟ್ವಾಳ:ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕಳೆದ 2002ಕ್ಕಿಂತ ಹಿಂದಿನ ಕಟ್ಟಡ ತೆರಿಗೆ ಮತ್ತು ನೀರಿನ ಬಿಲ್ಲು ಮತ್ತಿತರ ಬಿಲ್ಲು ಬಾಕಿ ಇರಿಸಿಕೊಂಡವರಿಗೆ ಬಾಕಿ ಕರ ವಸೂಲಿಗೆ ಸಂಬಂಧಿಸಿದಂತೆ ಈಗಾಗಲೇ ಇಲ್ಲಿನ ಕಾನೂನು ಸೇವೆಗಳ ಸಮಿತಿ ಮೂಲಕ ನೋಟೀಸು ರವಾನಿಸಲಾಗಿದೆ.

9btl-Adalth

ಇದಕ್ಕಾಗಿ ನೋಟೀಸು ಪಡೆದುಕೊಂಡ ಬಾಕಿದಾರರು ಇದೇ 11ರೊಳಗೆ ಕರ ಪಾವತಿಸಬೇಕು. ಇಲ್ಲದಿದ್ದಲ್ಲಿ ಬಿ.ಸಿ.ರೋಡ್ನ ನ್ಯಾಯಾಲಯದಲ್ಲಿ ಇದೇ 11ರಂದು ನಡೆಯಲಿರುವ ‘ಲೋಕ ಅದಾಲತ್’ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಯೇ ಪಾವತಿಸುವಂತೆ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *