ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕ ಒಕ್ಕೂಟ ನಿ. ಕುಲಶೇಖರ ಮಂಗಳೂರು ಮತ್ತು ಒಕ್ಕೂಟದ ವ್ಯಾಪ್ತಿಗೆ ಬರುವ ಎಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಜಾನುವಾರುಗಳ ಸಾಮೂಹಿಕ ಜಂತು ಹುಳಗಳ ನಿವಾರಣಾ ಕಾರ್ಯಕ್ರಮದ ಪ್ರಯುಕ್ತ ವೀರಕಂಭ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಉತ್ಪಾದಕರು ತಮ್ಮ ಜಾನುವಾರುಗಳಿಗೆ ಜಂತುಹುಳ ನಿವಾರಣಾ ಮದ್ದನ್ನು ನೀಡುವ ಉದ್ದೇಶದಿಂದ ಉಚಿತವಾಗಿ ಮದ್ದನ್ನು ನೀಡಲಾಯಿತು.

 

DSC_2362ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರು ಭಾಗವಹಿಸಿದ್ದರು. ಮೈರ ಜಗನ್ನಾಥ ಆಳ್ವರು ಪ್ರಗತಿಪರ ಹೈನುಗಾರರಾಗಿರುವ ಗೋಳ್ತಮಜಲು ಹಜಾಜ್ ಗ್ರೂಪ್ನ ಜಿ.ಅಹಮ್ಮದ್ ಮುಸ್ತಾಫರ ಜಾನುವಾರುಗಳಿಗೆ ಮದ್ದನ್ನು ನೀಡುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ  ಹರೀಶ್ ಬಂಗೇರ ಹಾಗೂ ಹಾಲು ಉತ್ಪಾದಕ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಅದರ ಅನುಕೂಲತೆಯನ್ನು ಪಡೆದುಕೊಂಡರು

By Suddi9

Leave a Reply

Your email address will not be published. Required fields are marked *