ಬಂಟ್ವಾಳ : ಕರ್ಬೆಟ್ಟು ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರ ಇದರ 4ನೇ ವರ್ಷದ ಹಿಮ್ಮೇಳ ಹಾಗೂ ನಾಟ್ಯ ತರಬೇತಿ ತರಗತಿ ಆರಂಭಗೊಂಡಿದ್ದು ಬಂಟ್ವಾಳ ತಾಲೂಕು ನರಿಕೊಂಬು ಮೊಗರ್ನಾಡು ಶ್ರೀ ಲಕ್ಷ್ಮಿ ನರಸಿಂಹ ದೇವಳದ ಪ್ರಹ್ಲಾದ ಮಂಟಪದಲ್ಲಿ ತರಬೇತಿ ಕಾರ್ಯಕ್ರಮ ಜರಗಿತು.

ನಿವೃತ್ತ ಮುಖ್ಯಶಿಕ್ಷಕ, ಹಿರಿಯ ಯಕ್ಷಗಾನ ಅರ್ಥದಾರಿ ಎನ್.ಕೃಷ್ಣರಾಜ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು. ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಮತ್ತು ನಾಟ್ಯ ಗುರು ಶ್ರೀ ವತ್ಸ ಕಾರ್ಕಳ ಅವರು ಮಕ್ಕಳನ್ನು ಆಶೀವರ್ದಿಸಿದರು.
ಕೇಂದ್ರದ ಸಂಚಾಲಕ ಕೃಷ್ಣರಾಜ ಭಟ್ ಕರ್ಬೆಟ್ಟು ಅವರು ಪ್ರಸ್ತಾವಿಸಿ ಮಾತನಾಡಿ 4 ವರ್ಷಗಳಿಂದ ಉಚಿತವಾಗಿ ನಾಟ್ಯ ತರಗತಿಗಳು ನಡೆಯುತ್ತಿದೆ. ವ್ಯಕ್ತಿಯ ವ್ಯಕ್ತಿತ್ವದ ವೃದ್ಧಿಗೆ ಪೂರಕವಾದ ಗಂಡು ಕಲೆ ಯಕ್ಷಗಾನದ ಅಧ್ಯಯನದ ಅವಕಾಶವನ್ನು ಸದುಪಯೋಗ ಮಾಡಬೇಕು ಎಂದು ಕರೆ ನೀಡಿದರು. ದಾಮೋದರ ಐ. ವೆಂಕಟೇಶ ರಾವ್, ಜಗನ್ನಾಥ ನೀರಪಾದೆ, ರವಿ ವಿಟ್ಲ , ಪ್ರತಿಭಾ, ಕವಿತಾ ಪ್ರಭು ಉಪಸ್ಥಿತರಿದ್ದರು.
ಹಿಮ್ಮೇಳ ಸಂಯೋಜಕ ಡಾ|ಸುಬ್ರಹ್ಮಣ್ಯ ಭಟ್ ಅವರು ಸ್ವಾಗತಿಸಿದರು. ನಾಟ್ಯ ಸಂಯೋಜಕ ಹೊಸಲಚ್ಚಿಲ್ ಯತೀಶ್ ಶೆಟ್ಟಿ ವಂದಿಸಿದರು.
ಪ್ರತೀ ಮಂಗಳವಾರ ಸಂಜೆ 3 ರಿಂದ ಹಿಮ್ಮೇಳ ತರಗತಿ ಹಾಗೂ 5 ರಿಂದ ನಾಟ್ಯ ತರಗತಿ ಮೊಗನರ್ಾಡು ಪ್ರಹ್ಲಾದ ಮಂಟಪದಲ್ಲಿ ನಡೆಯುತ್ತದೆ. ಆಸಕ್ತರು 9448502304ನ್ನು ಸಂಪಕಿಸಲು ಕೋರಲಾಗಿದೆ.
——————————————————————–
