ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತಿನ ನೂತನ ಅಧ್ಯಕ್ಷೆಯಾಗಿ ಚಂದ್ರವತಿ ಹಾಗೂ ಉಪಾಧ್ಯಕ್ಷರಾಗಿ ಪುಂಚಮೆ ಚಂದ್ರಶೇಖರ ರಾವ್ ಆಯ್ಕೆಯಾಗಿದ್ದಾರೆ.
ಚಂದ್ರವತಿ, ಚಂದ್ರಶೇಖರ ರಾವ್

ಈ ಬಾರಿ ಅಧ್ಯಕ್ಷ ಹುದ್ದೆಗೆ ಸಾಮನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮನ್ಯ ಮೀಸಲಾಗಿತ್ತು. ಒಟ್ಟು ಕರಿಯಂಗಳ ಗ್ರಾಮದಲ್ಲಿ 12 ಮಂದಿ ಚುನಾಯಿತ ಸದಸ್ಯರಲ್ಲಿ 10 ಮಂದಿ ಬಿಜೆಪಿ ಬೆಂಬಲಿತ ಸದಸ್ಯ ಬಲದಿಂದ ಅದ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವೀರೋಧವಾಗಿ ಅಯ್ಕೆಯಾಗಿದ್ದಾರೆ.
ಸದಸ್ಯರಾಗಿ ಲೋಕೇಶ್ ಭರಣಿ, ರಂಜನಿ, ಶಶಿಕಲಾ, ಸುರೇಶ ಪೂಜಾರಿ, ಕಿಶೋರ್ ,ರೇಖಾ, ಶಕುಂತಳಾ, ಗೋಪಾಲಕೃಷ್ಣ ಶೆಟ್ಟಿ, ಹಾಗೂ ಎಸ್ ಡಿ ಪಿ ಐ ಪಕ್ಷದ ಏಕ್ಯಕ್ಯ ಸದಸ್ಯ ಇಬ್ರಹಿಂನವಾಜ್ ಬಡಕಬೈಲ್ ಮತ್ತು ಕಾಂಗ್ರೇಸ್ ಬೆಂಬಲಿತ ಪಕ್ಷಕ್ಕೆ ಮಾಜಿ ಕರಿಯಂಗಳ ಗ್ರಾ.ಪಂ ಅಧ್ಯಕ್ಷೆ ವೀಣಾ ಆಚಾರ್ಯ ಏಕ್ಯಕ್ಯ ಸದಸ್ಯೆ ಕರಿಯಂಗಳ ಗ್ರಾಮಕ್ಕೆ ನೂತನ ಸದಸ್ಯರಾಗಿರುತ್ತಾರೆ.
