ಪುತ್ತೂರು: ಕೇದಾರನಾಥ್ ಮತ್ತು ಬದರೀನಾಥ್ಗೆ ತೆರಳಿದ್ದ ಕಡಬದ ನೆಹರುನಗರ ನಿವಾಸಿ ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಭಟ್ (61) ಜೂ.30ರಂದು ದೆಹಲಿಯಲ್ಲಿ ಮೃತಪಟ್ಟಿದ್ದಾರೆ.
ದೆಹಲಿ ಸಮೀಪದ ನಿಜಾಮು ದ್ದೀನ್ ರೈಲ್ವೇ ಸ್ಟೇಷನ್ನಲ್ಲಿ ರೈಲು ಹತ್ತುವ ವೇಳೆ ಕುಸಿದು ಬಿದ್ದು ಹೃದಯಾ ಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತ ದೇಹವನ್ನು ಜು.1ಕ್ಕೆ ಮಂಗಳೂರಿಗೆ ತರಲಾಗುವುದು ಎಂದು ತಂಡದ ಸದಸ್ಯರು ತಿಳಿಸಿದ್ದಾರೆ.
