ಯುವಾ ಬ್ರಿಗೇಡ್ ಪುತ್ತೂರು ಇದರ ವತಿಯಿಂದ ಪೃಥ್ವಿಯೋಗ ಕಾರ್ಯಕ್ರಮವು ಪುತ್ತೂರಿನ ಕೈಯ್ಯೂರಿನ ಪ್ರೌಢಶಾಲೆಯ ಆವರಣದಲ್ಲಿ ನಡೆಯಿತು. ಯುವಾ ಬ್ರಿಗೇಡ್ ನ ಸಕ್ರೀಯ ಕಾರ್ಯಾಕರ್ತರಾದ ಶಿವು ಪುತ್ತೂರು, ಜಗದೀಶ್ ಪುತ್ತೂರು, ನಂದಿಶ್ ಪುತ್ತೂರು, ಅರುಣ್, ಅನಿಲ್, ಮಲ್ಲೇಶ್, ಪ್ರಸಾದ್ ಹಾಗು ಶಾಲಾ ಮಕ್ಕಳು ಮುಖ್ಯೋಪಾದ್ಯಾಯರಾದ ವಿನೋದ್ ಕುಮಾರ್ ಭಾಗವಹಿಸಿದರು ಶಾಲೆಯ ಆವರಣದಲ್ಲಿ ನೆಡಬಹುದಾದ ಬಾದಾಮಿ, ಹಲಸು, ಬೇವಿನಗಿಡಗಳನ್ನು ನೆಡಲಾಯಿತು.
ಯುವಾ ಬ್ರಿಗೇಡ್ ಪುತ್ತೂರು ಇದರ ವತಿಯಿಂದ ಕಾರ್ಗಿಲ್ ವಿಜಯೋತ್ಸವವು ಇದೇ ಬರುವ 28-07-2015 ರಂದು ಸಾಯಂಕಾಲ 6 ಗಂಟೆಗೆ ಸ್ವಾಮಿಕಲಾಮಂದಿರ ತೆಂಕಿಲದಲ್ಲಿ ಜರಗಲಿರುವುದು. ಪ್ರಧಾನ ಭಾಷಣಕಾರರಾಗಿ ಯುವಾ ಬ್ರಿಗೇಡ್ ನ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆಯವರು ಅಗಮಿಸಲಿದ್ದಾರೆ.



