ಮಂಗಳೂರು: ಬೆಳ್ತಂಗಡಿಯ ಮಲವಂತಿಗೆ ಎಂಬಲ್ಲಿರುವ ನಾಗಬನಕ್ಕೆ ಕಿಡಿಗೇಡಿಗಳು ದನದ ತ್ಯಾಜ್ಯ ಎಸೆದ ಘಟನೆ ಸಂಭವಿಸಿದ್ದುಪೊಲೀಸರ ಬೀಡುಬಿಟ್ಟಿದ್ದಾರೆ. ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಪಿಕಪ್ನಲ್ಲಿ ಆಗಮಿಸಿದ ದುಷ್ಕರ್ಮಿಗಳ ತಂಡ ನಾಗಬನದ ಮೇಲೆ ದನದ ಮಾಂಸ, ತ್ಯಾಜ್ಯ ಹಾಗೂ ರುಂಡವನ್ನು ಎಸೆದು ಪರಾರಿ ಯಾಗಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಹಿಂದೂಗಳು ಘಟನಾ ಸ್ಥಳ ದತ್ತ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

