ಸಜೀಪಮೂಡ ಗ್ರಾಮಪಂಚಾಯತ್ನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರದ ಗಣಪತಿ ಭಟ್ ಹಾಗೂ ಉಪಾಧ್ಯಕ್ಷರಾಗಿ ಲೀನಾ ಮಿರಾಂಡ ಅವಿರೋಧವಾಗಿ ಆಯ್ಕೆಯಾದರು. ಪಂಚಾಯತ್ನ ರಾಜೀವ ಸೇವಾ ಕೆಂದ್ರದಲ್ಲಿ ಬಂಟ್ವಾಳ ಪುರಾಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಹಾಜರಿದ್ದರು. ಅಧ್ಯಕ್ಷ ಸ್ಥಾನ ಸಾಮನ್ಯ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಮಹಿಳೆಗೆ ಮೀಸಲಾಗಿತ್ತು.

BTW_JUNE29_9

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಸಂಜೀವ ಪೂಜಾರಿ, ಜಿ.ಪಂ.ಸದಸ್ಯೆ ಮಮತಾಗಟ್ಟಿ, ತಾ.ಪಂ.ಸದಸ್ಯೆ ಪುಷ್ಪಾವತಿ ಪ್ರಮುಖರಾದ ವಿಶ್ವನಾಥ ಬೆಳ್ಚಡ, ಗಿರೀಶ್ ಪೆರ್ವ ವೇದಿಕೆಯಲ್ಲಿ ಹಾಜರಿದ್ದು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿರು.

By Suddi9

Leave a Reply

Your email address will not be published. Required fields are marked *