ಕಾಸರಗೋಡು: ಕುಂಬಳೆ ಸರಕಾರಿ ಹೈಯರ್ ಸೆಕಂಡರಿ ಶಾಲೆಯ 10ನೇ ತರಗತಿಯಲ್ಲಿ ಕಲಿ ಯುತ್ತಿರುವ 5 ವಿದ್ಯಾರ್ಥಿ ಗಳು ನಿಗೂಢವಾಗಿ ನಾಪತ್ತೆಯಾದ ಘಟನೆ ಕುಂಬಳೆಯಲ್ಲಿ ನಡೆದಿದ್ದು ಇದುವರೆಗೂ ಸುಳಿವು ಅಲಭ್ಯವಾಗಿದೆ.
ಇದರಲ್ಲಿ ಓರ್ವ ವಿದ್ಯಾರ್ಥಿಗಳು ಮನೆಯಲ್ಲಿ ಪತ್ರ ಬರೆದಿಟ್ಟು ನಾಪತ್ತೆಯಾಗಿರುವುದು ಕುತೂಹಲ ಮೂಡಿಸಿದೆಯಲ್ಲದೆ ವಿದ್ಯಾರ್ಥಿಗಳಲ್ಲಿ ಮೊಬೈಲ್ ಇಲ್ಲದಿರುವುದು ಪತ್ತೆ ಕಾರ್ಯ ನಡೆಸಲು ಹಿನ್ನೆಡೆ ಸಿಕ್ಕಂತಾಗಿದೆ.
30-2
ಮುಳ್ಳೇರಿಯ ಅಬ್ದುಲ್ ಕರೀಮ್ರವರ ಪುತ್ರ ನೌಶಾದ್(16), ಕುಂಬಳೆ ಪೆರವಾಡ್ ಮುಹಮ್ಮದ್ ಹನೀಫಾರವರ ಪುತ್ರ ಮುರ್ಶಾದ್(17), ಕುಂಬಳೆ ಬದ್ರಿಯ ನಗರದ ಇಬ್ರಾಹಿಂರವರ ಪುತ್ರ ಮುಹಮ್ಮದ್ ಫಯಾಸ್(16), ಅರಿಕ್ಕಾಡಿ ಕ್ವಾಟರ್ಸ್ ನಿವಾಸಿ ಯೋಗಿಶ್ರವರ ಪುತ್ರ ಜಿತೇಶ್(16) ನಿಗೂಢ ನಾಪತ್ತೆಯದವರು . ಇವರು ಕಳೆದ ಶನಿವಾರ ಸ್ಪೆಷಲ್ ಕ್ಲಾಸ್ ಇದೆ ಎಂಬುದಾಗಿ ಸುಳ್ಳು ಮಾಹಿತಿ ನೀಡಿ ಮನೆಯಿಂದ ಹೊರಟಿದ್ದರು. ಆದರೆ ರಾತ್ರಿಯಾಯಾದರೂ ಮನೆಗೆ ಬಾರದಿರುವುದರಿಂದ ಕಂಗಾಲಾದ ಹೆತ್ತವರು ಶಾಲೆಗೆ ಬಂದು ವಿಚಾರಿಸಿದಾಗ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತು. ಇರ್ಶಾದ್ ಎಂಬ ವಿದ್ಯಾರ್ಥಿಯ ಮನೆಯಲ್ಲಿ ಒಂದು ಕೈಬರಹ ಪತ್ತೆಯಾಗಿದ್ದು, ಇದರಲ್ಲಿ `ನಮ್ಮನ್ನು ಹುಡುಕಾಡಬೇಡಿ ನಾವು ಹಿಂತಿರುಗಿ ಬರುವೆವು’ ಎಂಬುದಾಗಿ ಬರೆದಿಡಲಾಗಿತ್ತು. ಹೆತ್ತವರು ಕುಂಬಳೆ ಠಾಣೆಯಲ್ಲಿ ದೂರು ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *