ರೋಗ ತಡೆಯುವ ಯೋಗಕ್ಕೆ ಪ್ರಚಾರಬೇಕು: ಡಾ| ಗಿರೀಶ್ ಭಟ್
ಬಂಟ್ವಾಳ: ಯೋಗವು ಹಲವು ರೋಗಗಳಿಗೆ ಚಿಕಿತ್ಸೆಯಾಗಿರುವುದಲ್ಲದೆ, ಮುಂದೆ ರೋಗ ಬರದಂತೆ ತಡೆಯಬಲ್ಲ ಒಂದು ಉತ್ತಮ ಅಭ್ಯಾಸ ಎಂದು ಬಂಟ್ವಾಳ ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ|ಗಿರೀಶ್ ಭಟ್ ಹೇಳಿದರು. ಕಾಲೇಜಿನ ಎನ್.ಎಸ್.ಎಸ್ ಹಾಗೂ ಇತರ ಸಮಿತಿಗಳ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ರೋಗಕ್ಕೆ ಜೌಷಧಿಗಳ ಸಂಶೋಧನೆ ನಿರಂತರವಾಗಿ ಆಗುತ್ತಿರುತ್ತದೆ. ಆದರೆ ರೋಗ ತಡೆಗಟ್ಟುವ ಬಗ್ಗೆ ಸಂಶೋಧನೆಗೆ ಹಣ ಹೂಡುವವರಿಲ್ಲ. ಹೀಗಾಗಿ ಯೋಗಕ್ಕೆ ಪ್ರಚಾರ ನೀಡುವ ಕೆಲಸವಾಗಬೇಕು ಎಂದು ಅವರು ಹೇಳಿದರು.
Untitled-1 copy
ಯೋಗ ಶಿಕ್ಷಕಿ ಮೋಹಿನಿ ಅವರು ಯೋಗದ ಮಹತ್ವ ತಿಳಿಸಿಕೊಟ್ಟು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಪ್ರಾತ್ಯಕ್ಷಿಕೆ ನೀಡಿದರು. ಡಾ|ವೈಶಾಲಿ ಯು, ಪುಟ್ಟೇಗೌಡ ಹೆಚ್.ಸಿ. ನಟೇಶ್ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದುಸಹಕರಿಸಿದರು. ಎನ್.ಎಸ್.ಎಸ್. ಯೋಜನಾಧಿಕಾರಿ ಕರುಣಾಕರ ಕಾರ್ಯಕ್ರಮ ಸಂಯೋಜಿಸಿ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *