ಬಂಟ್ವಾಳ: ನಿಮೋನಿಯಾ ರೋಗದಿಂದ ಬಳಲುತ್ತಿದ್ದ ನವವಿವಾಹಿತೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ. ತಾಲೂಕಿನ ಮಯ್ಯರಬೈಲು ನಿವಾಸಿ ಲೋಕಯ್ಯ ಮೂಲ್ಯ ಎಂಬವರ ಮಗಳು ಶೃತಿ (21) ಮೃತಪಟ್ಟ ನವವಿವಾಹಿತೆ.
IMG-20150623-WA0019
ಒಂದು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಶೃತಿ ಕಳೆದ ಕೆಲ ದಿನಗಳಿಂದ ನಿಮೋನಿಯಾ ರೋಗದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮಡಂತ್ಯಾರಿನ ಕೊಲ್ಪೆದಬೈಲುವಿನ ಪತಿಯ ಮನೆಯಲಿದ್ದ ಇವರಿಗೆ ರೋಗ ಕಾಣಿಸಿಕೊಂಡಿದ್ದ ಹಿನ್ನಲೆಯಲ್ಲಿ ತವರು ಮನೆಗೆ ಬಂದಿದ್ದರು. ಎರಡು ದಿನಗಳ ಹಿಂದೆ ರೋಗ ಉಲ್ಭಣಿಸಿದ್ದು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರುವುದಾಗಿ ತಿಳಿದು ಬಂದಿದೆ. ಲೋಕಯ್ಯ ಪೂಜಾರಿಯವರ ಮೂರು ಮಂದಿ ಹೆಣ್ಣುಮಕ್ಕಳ ಪೈಕಿ ಶೃತಿ ಎರಡನೆಯವರು.

By Suddi9

Leave a Reply

Your email address will not be published. Required fields are marked *