ಮುಂಬಯಿ (ಮಂಗಳೂರು), : ಲಕುಮಿ ಸಿನಿ ಕ್ರಿಯೇಶನ್ಸ್‍ಲಾಂಛನದಡಿ ಬಿಡುಗಡೆಗೊಂಡ `ಎಕ್ಕ ಸಕ’ ತುಳು ಚಲನಚಿತ್ರ ಯಶಸ್ವಿ ಐವತ್ತುದಿನಗಳನ್ನು ಪೂರೈಸಿ ಶತದಿನೋತ್ಸವದತ್ತ ಮುನ್ನುಗ್ಗುತ್ತಿದೆ. ಈ ಸಂದರ್ಭದಲ್ಲಿ
ವೀಕ್ಷಕರಿಗೆ ಲಕ್ಕಿ ಡ್ರಾ ಮೂಲಕ ಬಹುಮಾನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಜ್ಯೋತಿ ಚಿತ್ರಮಂದಿರದ ಸಿನಿಮಾದ ಟಿಕೆಟ್‍ನಲ್ಲಿ ಪ್ರತಿ ವಾರ ಲಕ್ಕಿಡ್ರಾ ನಡೆಯಲಿದೆ. ಲಕ್ಕಿ ಡ್ರಾದ ಬಹುಮಾನ`ಮೊಬೈಲ್’ ಅಲ್ಲದೆ ಜ್ಯೋತಿ ಚಿತ್ರಮಂದಿರದಲ್ಲಿ 50ನೇ ದಿನದಿಂದ 100ನೇ ದಿನದ ತನಕ ಪ್ರದರ್ಶನದ ಟಿಕೆಟ್‍ನಲ್ಲಿ ಆಯ್ಕೆಯಾದ ವಿಜೇತರಿಗೆ 100ನೇ ದಿನದಂದು 3 ಬಂಪರ್ ಬಹುಮಾನ ನೀಡಲು ಚಿತ್ರ ತಂಡ ಉದ್ದೇಶಿಸಿದೆ.
ಮೊದಲ ಬಹುಮಾನ 32 ಇಂಚು ಟಿವಿ, 2ನೇ ಬಹುಮಾನ 1ವಾಷಿಂಗ್‍ಮೆಶಿನ್, 3ನೇ ಬಹುಮಾನ 1 ರೆಫ್ರಿಜರೇಟರ್ ಹಾಗೂ 10 ಆಕರ್ಷಕ ಬಹುಮಾನವಿದೆ. ಜೂನ್ 28ರಂದು ಸಂಜೆ 6.15ಕ್ಕೆ ಮೊದಲ ಡ್ರಾ ನಡೆಯಲಿದೆ `ಎಕ್ಕ ಸಕ’ ಕೇವಲ 50 ದಿನಗಳಲ್ಲಿ 1.39ಕೋಟಿ ರೂಪಾಯಿ ದಾಖಲೆ ಗಳಿಕೆ ಮಾಡಿದೆ. ಇದಕ್ಕೆ ಚಿತ್ರದ ಗುಣಮಟ್ಟ ಮಾತ್ರವಲ್ಲ, ಕಲಾಭಿಮಾನಿಗಳ ಪ್ರೋತ್ಸಾಹ ಶ್ರೀರಕ್ಷೆಯಾಗಿದೆ ಎಂದು ಸಿನಿಮಾದ ನಿರ್ಮಾಪಕ ಲಯನ್
ಕಿಶೋರ್ ಡಿ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮುಂದಿನ ದಿನಗಳಲ್ಲಿ ಮುಂಬೈ, ಬೆಂಗಳೂರು ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ `ಎಕ್ಕ ಸಕ’ ಪ್ರದರ್ಶನಗೊಳ್ಳಲಿದೆ. `ಎಕ್ಕ ಸಕ’ ಪ್ರತಿಯೊಬ್ಬರ ಮನೆ, ಮನಗಳಲ್ಲಿ ಪ್ರತಿಧ್ವನಿಸುತ್ತಿದೆ.

Ekkasaka Tulu Film (A1)

 

ಆರು ಚಿತ್ರ ಮಂದಿರಗಳಲ್ಲಿ 50 ದಿನ ಪೂರೈಸಿ ಒಟ್ಟು 14 ಚಿತ್ರ ಮಂದಿರಗಳಲ್ಲಿ 1551 ನೇ ಪ್ರದರ್ಶನದ ಮೂಲಕ ದಾಖಲೆ ನಿರ್ಮಿಸಿದೆ. ಸದಭಿರುಚಿಯ ಸಂಭಾಷಣೆ, ಕುಟುಂಬ ಸಮೇತರಾಗಿ ನೋಡಲೇಬೇಕಾದ ಚಿತ್ರವಾಗಿದೆ. ಕಾಮಿಡಿ ಪಂಚ್ ಪ್ರತಿಯೊಬ್ಬನ ಕಲಾಭಿಮಾನಿಯ ಮನ ಮುಟ್ಟಿದೆ. ತುಳುರಂಗಭೂಮಿಯ ಕಲಾವಿದರ ಅಧ್ಬುತ ಅಭಿನಯ, ಸುಂದರ ಪ್ರೀತಿಯ ಕಥೆಯ ಸುತ್ತ ಹೆಣೆದ
ಚಿತ್ರಕಥೆ ಹಲವು ಬಾರಿ ವೀಕ್ಷಿಸುವಂತೆ ಮಾಡುತ್ತಿದೆ ಎಂದು ಮತ್ತೋರ್ವ ನಿರ್ಮಾಪಕ ಲಯನ್ ಚಂದ್ರಹಾಸ ಶೆಟ್ಟಿ ಹೇಳಿದರು. ಉಮಾನಾಥ ಕೋಟ್ಯಾನ್‍ರವರು ಮಾತನಾಡಿ, ಥಿಯೇಟರ್‍ಗಳಲ್ಲಿ ತುಳು ಸಿನೆಮಾ ಚೆನ್ನಾಗಿ ಓಡುತ್ತಿದೆ, ಜನರು ತುಳು ಸಿನೇಮಾವನ್ನು ಹೆಚ್ಚಾಗಿ ಪ್ರೋತ್ಸಾಹಿಸುತ್ತಿದ್ದಾರೆ. ಓಳ್ಳೆಯ ಸಿನೆಮಾಕ್ಕೆ ತುಳು ಜನರು  ಪ್ರೋತ್ಸಾಹಿಸುತ್ತಾರೆ ಎಂಬುದು ಚಾಲಿಪೋಲಿಲು ಹಾಗು ಎಕ್ಕಸಕ ಚಿತ್ರದಿಂದ ಬಯಲಾಗಿದೆ. ಎಕ್ಕಸಕ ಒಂದು ಉತ್ತಮ ಸಂದೇಶವುಳ್ಳ ಚಿತ್ರವೆಂದು ಹೇಳಿದರು. ನಿರ್ಮಾಪಕ ಗಿರೀಶ್ ಶೆಟ್ಟಿ, ನಿರ್ದೇಶಕ ಸೂರಜ್ ಶೆಟ್ಟಿ, ಚಾಲಿಪೋಲಿಲು ಸಿನೆಮಾ ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ, ಮೋಹನ್ ಕೊಪ್ಪಲ, ಜಗನ್ನಾಥ ಶೆಟ್ಟಿಬಾಳ, ಕೃಷ್ಣ ಸಾರಥಿ, ವಸಂತ ವಿ.ಅಮೀನ್, ಮಯೂರ್ ಶೆಟ್ಟಿ, ಮಂಜಾನೆ ಮಂಜು, ಸುಂದರ ರೈ ಮಂದಾರ, ಪ್ರದೀಪ್ ಆಳ್ವಾ ಕದ್ರಿ, ನಾಯಕಿ ನಟಿ ಸೊನಾಲ್ ಮೊಂತೆರೋ,
ಲಯನ್ಸ್ ಪ್ರಾದೇಶಿಕ ಚೇರ್‍ಮೆನ್ ರತ್ನಾಕರ್ ದಂಪತಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *