<ವಡೋದರದಲ್ಲಿ ಅಂಟಿಸಲಾಗಿದ್ದ ಮೋದಿ ಬ್ಯಾನರ್ ಗಳನ್ನು ಕಿತ್ತು ಹಾಕಿದ ಆರೋಪದಡಿ ಕಾಂಗ್ರೆಸ್ ಸಂಸದ ಮಧುಸೂಧನ್ ಮಿಸ್ತ್ರಿ ಹಾಗೂ ಕೆಲವು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.ನರೇಂದ್ರ ಮೋದಿ ಪೋಸ್ಟರ್‌ಗಳನ್ನು ಕಿತ್ತು ಹಾಕಿ ಆ ಜಾಗದಲ್ಲಿ ಮಿಸ್ತ್ರಿಯ ಭಾವಚಿತ್ರವನ್ನು ಲಗತ್ತಿಸಲು ಕಾಂಗ್ರೆಸ್ ಕಾರ್ಯಕರ್ತರ ಗುಂಪು ಪ್ರಯತ್ನಿಸಿತ್ತು. 

madhusudan-mistry

ಮೋದಿ ಉತ್ತರ ಪ್ರದೇಶದ ವಾರಣಾಸಿ ಮತ್ತು ಗುಜರಾತಿನ ವಡೋದರಾದಿಂದ ಸಂಸತ್ ಪ್ರವೇಶಿಸಲು ಅಪೇಕ್ಷಿಸಿದ್ದಾರೆ.ಇದು ಅವರಿಗೆ ಮೊದಲ ರಾಷ್ಟ್ರೀಯ ಚುನಾವಣೆಯಾಗಿದ್ದು ಪ್ರಸ್ತುತ ಅವರು ಗುಜರಾತ್ ರಾಜ್ಯ ಶಾಸಕಾಂಗದ ಸದಸ್ಯರಾಗಿದ್ದಾರೆ. ವಾರಣಾಸಿಯಲ್ಲಿ 63 ವರ್ಷ ವಯಸ್ಸಿನ ಮೋದಿ ವಿರುದ್ಧ ಯಾರನ್ನು ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. 69 ವರ್ಷ ವಯಸ್ಸಿನ ಮಿಸ್ತ್ರಿ,ಸಂಸತ್ ಸದಸ್ಯರಾಗಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದು, ಪಕ್ಷದ ಯುವ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಹತ್ತಿರದವರೆಂದು ಪರಿಗಣಿಸಲಾಗಿದೆ.

By suddi9

Leave a Reply

Your email address will not be published. Required fields are marked *