ಬಂಟ್ವಾಳ: ಮನೆಯಂಗಳದಲ್ಲಿ ನಡೆದಾಡುತ್ತಿದ್ದ ಪುಟ್ಟ ಮಗುವೊಂದು ನೀರು ತುಂಬಿದ ಹಳ್ಳಕ್ಕೆ ಬಿದ್ದು ಮೃತಪಟ್ಟ ಘಟನೆ ಶನಿವಾರ ಬಂಟ್ವಾಳ ತಾಲೂಕಿನ ಕಕ್ಯಪದವಿನಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಪರಿಶಿಷ್ಟ ಜಾತಿಗೆ ಸೇರಿದ ಲೋಕಯ್ಯ ಎಂಬವರ ಎರಡು ವರ್ಷದ ಮಗು ಲಾವಣ್ಯ ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕಿ. ಮನೆಯಂಗಳದಲ್ಲಿ ನಡೆದಾಡುತ್ತಿದ್ದ ಮಗು ಮನೆ ಸಮೀಪವಿದ್ದ ಹಳ್ಳಕ್ಕೆ ಆಕಸ್ಮಿಕವಾಗಿ ಬಿದ್ದಿದೆ. ತಕ್ಷಣ ಮನೆಮಂದಿ ಮಗುವನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮಗು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

By Suddi9

Leave a Reply

Your email address will not be published. Required fields are marked *