ಮೂಡುಬಿದಿರೆಯಲ್ಲಿ ಮಹಾಸಂಪರ್ಕ ಅಭಿಯಾನ ಆರಂಭ
ಮೂಡುಬಿದಿರೆ : ಭಾರತೀಯ ಜನತಾ ಪಾರ್ಟಿಯ ಮಹಾಸಂಪರ್ಕ ಅಭಿಯಾನದ ಅಂಗವಾಗಿ ಮೂಡುಬಿದಿರೆ ಕ್ಷೇತ್ರದಲ್ಲಿನ ಅಭಿಯಾನಕ್ಕೆ ಶುಕ್ರವಾರ ಒಂಟಿಕಟ್ಟೆಯಲ್ಲಿ ಚಾಲನೆ ನೀಡಲಾಯಿತು.
ಬಿಜೆಪಿಯ ಹಿರಿಯ ಕಾರ್ಯಕರ್ತ ಒಂಟಿಕಟ್ಟೆಯ ಸುರೇಂದ್ರ ಅಮೀನ್ ಅವರು ಅಭಿಯಾನದ ಮೊದಲ ಸದಸ್ಯರಾಗಿ ನೋದಾಣಿ ಮಾಡಿಕೊಂಡು ಮಾತನಾಡಿ ತಾನು ಹಿಂದಿನಿಂದಲೂ ಬಿಜೆಪಿಯ ಕಾರ್ಯಕರ್ತನಾಗಿದ್ದೇನೆ. ಈ ಹಿಂದೆ ತಾನು ಸಂಘದ ಸದಸ್ಯನಾಗಿದ್ದ ಸಂದರ್ಭದಲ್ಲಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹಲವು ಹೋರಾಟಗಳಲ್ಲಿ ತೊಡಗಿಸಿಕೊಂಡು ಜೈಲುವಾಸವನ್ನು ಕಂಡಿದ್ದೇನೆ. ತನಗೆ ಬಿಜೆಪಿ ಪಕ್ಷದ ಬಗ್ಗೆ ಪ್ರೀತಿ ವಿಶ್ವಾಸ ಇದೆ ಇದೀಗ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿರುವುದರಿಂದ ನಮ್ಮೆಲ್ಲಾ ಆಸೆ, ಉದ್ದೇಶಗಳು ಈಡೇರಬಹುದೆಂಬ ನಂಬಿಕೆ ಇದೆ ಎಂದು ಹೇಳಿದರು.
ಬಿಜೆಪಿ ಸದಸ್ಯತ್ವದ ಮಹಾ ಸಂಪರ್ಕ ಅಭಿಯಾನದ ಜಿಲ್ಲಾ ಸಹ ಪ್ರಮುಖ್ ಸುದರ್ಶನ ಎಂ. ಮಾತನಾಡಿ ಕಳೆದ ನವೆಂಬರ್‍ನಲ್ಲಿ ದೇಶದ ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಥಮವಾಗಿ ಮಿಸ್‍ಕಾಲ್ ಮೂಲಕ ಸದಸ್ಯತ್ವಕ್ಕೆ ಚಾಲನೆ ನೀಡಿದ್ದು ಇದೀಗ ದೇಶದಲ್ಲಿ 11 ಕೋಟಿಗೂ ಮಿಕ್ಕಿ ಸದಸ್ಯತ್ವವನ್ನು ಹೊಂದಿದ್ದು ಅತೀ ದೊಡ್ಡ ಪಕ್ಷವಾಗಿ ಬೆಳೆದಿದೆ. ಮೂಡುಬಿದಿರೆಯಲ್ಲಿ ಈ ಮಹಾ ಸಂಪರ್ಕ ಅಭಿಯಾನದ ಮೂಲಕ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿ 30 ಸಾವಿರ ಮತದಾರರನ್ನು ಹೊಂದಿದೆ. ಇದೀಗ ಮೊದಲು ಮಿಸ್‍ಕಾಲ್ ಕೊಟ್ಟಿರುವ ಸುರೇಂದ್ರ ಅಮೀನ್ ಅವರನ್ನು ಅಧಿಕೃತವಾಗಿ ನೋದಾಣಿ ಮಾಡಿಸಿಕೊಳ್ಳಲಿದೆ. ಜೂ 23 ರಂದು ಜನ ಸಂಘದ ಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಮತ್ತು ಕರ್ನಾಟಕದಲ್ಲಿ ಬಿಜೆಪಿಯನ್ನು ಸಂಘಟಿಸಿರುವ ಜಗನ್ನಾಥ ಜೋಶಿ ಅವರ ಜನ್ಮದಿನವಾಗಿದ್ದು ಈ ಸಂದರ್ಭದಲ್ಲಿ ಜುಲೈ 6ರವರೆಗೆ ಈ ಅಭಿಯಾನವನ್ನು ಕೈಗೊಳ್ಳಲಾಗುದು ಹಾಗೂ ಸದಸ್ಯರ ಮನೆಗೆ ಭೇಟಿ ನೀಡಿ ನೋದಾಣಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ, ಜಿಲ್ಲಾ ಸದಸ್ಯ ಭುವನಾಭಿರಾಮ ಉಡುಪ, ಕ್ಷೇತ್ರಾಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಕ್ಷೇತ್ರದ ಪ್ರಮುಖರಾದ ಕಸ್ತೂರಿ ಪಂಜ, ಸಹ ಪ್ರಮುಖ್ ದೇವಪ್ರಸಾದ್ ಪುನರೂರು, ಮೂಡುಬಿದಿರೆ ವಲಯ ಪ್ರಧಾನ ಕಾರ್ಯದರ್ಶಿ ನಾಗರಾಜ ಪೂಜಾರಿ, ಪುರಸಭಾ ಸದಸ್ಯ ಲಕ್ಷ್ಮಣ್ ಪೂಜಾರಿ, ಪಂಚಾಯತ್ ಸದಸ್ಯ ಶಶಿಧರ ಆಂಚನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.