ಮೂಡುಬಿದರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಮ್ಯೆಕಾನಿಕಲ್ ವಿಧ್ಯಾರ್ಥಿಗಳು ಬಹುಉಪಯೋಗಿ ಅಡಿಕೆ ಸುಲಿಯುವ ಯಂತ್ರವನ್ನು ಆವಿಷ್ಕಾರಿಸಿದ್ದಾರೆ.

ಯಂತ್ರವು ಸಣ್ಣ ಮತ್ತು ಮಧ್ಯಮ ವರ್ಗದ ಅಡಿಕೆ ಬೆಳೆಗಾರರಿಗೆ ತುಂಬಾ ಉಪಯೋಗಕಾರಿಯಾಗಿದೆ. ವಿದ್ಯುತ್ ಮತ್ತು ಮಾನವ ಚಾಲಿತ ಸಾಮಥ್ರ್ಯವನ್ನು ಹೊಂದಿದ್ದು ಗಂಟೆಗೆ 25 ಕೆ.ಜಿ ಅಡಿಕೆಯನ್ನು ಬಹಳ ನಾಜುಕಾಗಿ ಸುಲಿಯುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಯಂತ್ರಗಳಿಗೆ ಹೋಲಿಸಿದರೆ ಈ ಯಂತ್ರದ ಗಾತ್ರ ಸಣ್ಣದಿದ್ದು ಕೇವಲ 1 ಎಚ್.ಪಿ ಮೋಟರ್ ಸಹಾಯದಿಂದ ಚಲಿಸುತ್ತದೆ. ಈ ಯಂತ್ರದಿಂದ ಧೂಳು ಮತ್ತು ಶಬ್ದ ಬಹಳ ಕಡಿಮೆ.ನುರಿತ ಕೆಲಸಗಾರರ ಅವಶ್ಯಕತೆ ಇಲ್ಲ.
ಮ್ಯೆಕಾನಿಕಲ್ ವಿಭಾಗದ ಪ್ರಾಧ್ಯಾಪಕ ಹರೀಶ್.ಕೆ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಶಿವರಾಜ್ ಬಿ. ಕೆ, ಹರಿಪ್ರಸಾದ್, ಕೇಶವ ಕಾರ್ಲ ಮತ್ತು ಸುಜನ್ ಕುಮಾರ್ ಯಂತ್ರವನ್ನು ಆವಿಷ್ಕಾರಿಸಿದ್ದಾರೆ. ಕಾಲೇಜಿನ ಆಡಳಿತ ಟ್ರಸ್ಟಿ ವಿವೇಕ್ ಆಳ್ವ , ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಮತ್ತು ಮ್ಯೆಕಾನಿಕಲ್ ವಿಭಾಗದ ಮುಖ್ಯಸ್ಥ ಕೆ. ವಿ. ಸುರೇಶ್ ಪ್ರೋತ್ಸಾಹಿಸಿದ್ದಾರೆ.
