ಮೂಡುಬಿದರೆ: ಜಮಿಯ್ಯತುಲ್ ಫಲಾಹ್ ಮೂಡುಬಿದರೆ ಘಟಕದ ಮಹಾಸಭೆಯು ಅಧ್ಯಕ್ಷ ಹಾಜಿ ಎಂ.ಎಚ್.ಮುಹಮ್ಮದ್ ಶರೀಫ್‍ರವರ ಅಧ್ಯಕ್ಷತೆಯಲ್ಲಿ ಸಮಾಜಮಂದಿರದಲ್ಲಿನಡೆಯಿತು. ಘಟಕದ ಕೇಂದ್ರಿಯ ಸಮಿತಿಯಿಂದ ಚುನಾವಣಾಧಿಕಾರಿಗಳಾಗಿ ಆಗಮಿಸಿದ ಅಬ್ದುಲ್ಲತೀಫ್ ಸಾಹೇಬ್ ಬೆಳ್ತಂಗಡಿ ಮತ್ತು ಅಬ್ಬೋನು ಮದ್ದಡ್ಕ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು. ನೂತನ ಅಧ್ಯಕ್ಷ ಗಫೂರ್ ಸಾಹೇಬ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಜಮಿಯ್ಯತುಲ್ ಫಲಾಹ್ ಮೂಡುಬಿದರೆ ಘಟಕವು ಬೆಳುವಾಯಿ ಸಮೀಪ 6 ಎಕರೆ ಜಮಿನು ಖರೀದಿಸಿದ್ದು ಶೀಘ್ರವೇ ಆ ಸ್ಥಳದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರವನ್ನು ಪ್ರಾರಂಭಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಕೇಂದ್ರಿಯ ಸಮಿತಿಗೆ ಈಗಾಗಲೇ ಸುಮಾರು 80 ಲಕ್ಷ ರೂ ಯೋಜನಾ ವರದಿಯನ್ನು ಸಲ್ಲಿಸಿದು, ಕೇಂದ್ರೀಯ ಸಮಿತಿ ಪರಿಶೀಲಿಸಿ ಅನುಮತಿ ನೀಡಿದೆ ಎಂದರು. ಕಾರ್ಯದರ್ಶಿ ಹಸ್ದುಲ್ಲಾ ಇಸ್ಮಾಯಿಲ್ ವಾರ್ಷಿಕ್ ವರದಿ ವಾಚಿಸಿದರು. ಕೋಶಾಧಿಕಾರಿ ಮುಹಮ್ಮದ್ ಬಶೀರ್ ಪುತ್ತಿಗೆ ಲೆಕ್ಕಪತ್ರ ಮಂಡಿಸಿದರು. ಜೆದ್ದಾಘಟಕದ ಲಿಯಾಖತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಕದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಂಎಚ್ ಶರೀಫ್ ಸ್ವಾಗತಿಸಿದರು, ಹಸ್ದುಲ್ಲಾ ಇಸ್ಮಾಯಿಲ್ ಕಾರ್ಯಕ್ರಮ ನಿರೂಪಿಸಿದರು.
ನೂತನ ಪದಾಧಿಕಾರಿಗಳು: ಶೇಖ್ ಅಬ್ದುಲ್ ಗಫೂರ್ ಸಾಹೇಬ್ (ಅಧ್ಯಕ್ಷ), ಆರ್‍ಬಿ ಸಯ್ಯಿದ್ ಸಲೀಂ, ಮುಹಮ್ಮದ್ ಆರಿಫ್ ಪ್ರೀಮಿಯರ್( ಉಪಾಧ್ಯಕ್ಷ), ಸಲೀಂ ಹಂಡೇಲ್( ಕಾರ್ಯದರ್ಶಿ), ಮುಹಮ್ಮದ್ ಬಶೀರ್ ಪುತ್ತಿಗೆ(ಜೊತೆ ಕಾರ್ಯದರ್ಶಿ), ಹಸ್ದುಲ್ಲಾ ಇಸ್ಮಾಯಿಲ್( ಕೋಶಾಧಿಕಾರಿ), ಮಹಮ್ಮದ್ ಹರ್ಷದ್( ಸಂಘಟಣಾ ಕಾರ್ಯದರ್ಶಿ) ಶಬೀರ್ ಅಹ್ಮದ್( ಪತ್ರಿಕಾ ಕಾರ್ಯದರ್ಶಿ) ಆಯ್ಕೆ ಮಾಡಲಾಯಿತು. ಒಟ್ಟು ಕಾರ್ಯಕಾರಿ ಸಮಿತಿಗೆ 22 ಜನ ಸದಸ್ಯರನ್ನು ಮತ್ತು 2 ನಾಮನಿರ್ದೇಶಕ ಸದಸ್ಯರನ್ನು ಆರಿಸಲಾಯಿತು.
Untitled-1 copy

By Suddi9

Leave a Reply

Your email address will not be published. Required fields are marked *