ಬಂಟ್ವಾಳ: ಹಲಸು ಬಹುಪಯೋಗಿ ಆಹಾರ. ಹಿಂದಿನ ಕಾಲದಲ್ಲಿ ಊಟಕ್ಕೆ ಕಷ್ಟಕಾಲ ಇದ್ದಾಗ ಅದನ್ನೆ ತಿಂದು ಜೀವನ ನಡೆಸಿಕೊಂಡು ಬಂದವರು ಇದ್ದಾರೆ. ಔಷಧೀಯ ಗುಣವನ್ನು ಹೊಂದಿರುವ ಹಲಸನ್ನು ಉಳಿಸಿ, ಬೆಳೆಸುವ ಹಾಗೂ ಅದರ ಮೌಲ್ಯವರ್ಧನೆ ಮಾಡುವ ಅಗತ್ಯತೆ ಇದೆ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು.
ಸೌತ್ಕೆನರಾ ಪೋಟೋಗ್ರಾಫರ್ಸ್ ಎಸೋಸೀಯೇಷನ್ ದಕ್ಷಿಣ ಕನ್ನಡ ಉಡುಪಿ ಇದರ ರಜತ ಸಂಭ್ರಮದ ಪ್ರಯುಕ್ತ ಬಂಟ್ವಾಳ ವಲಯದ ಆಶ್ರಯದಲ್ಲಿ ಹಲಸಿನೊಂದಿಗೆ ಒಂದು ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ವಸ್ತುಗಳ ಮೌಲ್ಯವರ್ಧನೆ ಮಾಡಿದಾಗ ಅದರ ಮಾರುಕಟ್ಟೆ ದರ ಹೆಚ್ಚಾಗುತ್ತದೆ ಎಂದರು.

14btl-halasu
ಸೌತ್ ಕೆನರಾ ಪೊಟೋ ಗ್ರಾಫರ್ಸ್ ಎಸೋಷಿಯೇಷನ್ನ ಜಿಲ್ಲಾಧ್ಯಕ್ಷ ವಾಸುದೇವ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯ 14 ವಲಯಗಳಲ್ಲಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಬಂಟ್ವಾಳ ವಲಯ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. 25 ವರ್ಷಗಳ ಹಿಂದೆ ಕೇವಲ 12 ಮಂದಿ ಸದಸ್ಯರಿಂದ ಎಸೋಷಿಯೇಷನ್ ಇಂದು 3 ಸಾವಿರಕ್ಕಿಂತಲೂ ಅಧಿಕ ಸದಸ್ಯರನ್ನೋಳಗೊಂಡಿರುವ ಬಲಿಷ್ಠವಾದ ಸಂಘಟನೆಯಾಗಿದೆ ಎಂದರು.
ಜಿ.ಪಂ.ಉಪಾಧ್ಯಕ್ಷ ಸತೀಶ ಕುಂಪಲ, ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ್, ಬುಡಾ ಅಧ್ಯಕ್ಷ ಪಿಯುಸ್ ಎಲ್.ರೊಡ್ರಿಗಸ್, ನಿವೃತ್ತ ಅರಣ್ಯಾಧಿಕಾರಿ ಗ್ಯಾಬಿಯಲ್ ವೇಗಸ್, ಪುರಸಭಾ ಸದಸ್ಯ ಸದಾಶಿವ ಬಂಗೇರಾ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ, ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಕಾರಂತ, ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಾನಂದ ಬಾಳಿಗ, ಜೆಸಿಐ ಬಂಟ್ವಾಳದ ಅಧ್ಯಕ್ಷ ಲೋಕೇಶ್ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಸ್ಯಶ್ಯಾಮಲದ ದಿನೇಶ್ ನಾಯಕ್ ಅವರನ್ನು ಈ ಸಂದರ್ಭ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಆನಂದ ಎನ್. ಸ್ವಾಗತಿಸಿದರು. ಕಾರ್ಯದರ್ಶಿ  ರಾಜೇಂದ್ರ ವಂದಿಸಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆ ಅವರಿಂದ ಹಲಸಿನ ಮೌಲ್ಯವರ್ಧನೆ- ವಿಶ್ವದರ್ಶನ ಕುರಿತಾಗಿ ಉಪನ್ಯಾಸ ನಡೆಯಿತು. ರಾಜ್ಯ ಮಟ್ಟದ ಹಲಸು ಛಾಯಾಚಿತ್ರ ಸ್ಪರ್ಧೆ , ಮಹಿಳೆಯರಿಗಾಗಿ ಹಲಸಿನ ಖಾದ್ಯಗಳ ಅಡುಗೆ ಸ್ಫರ್ಧೆ , ಹಾಗೂ ಹಲಸಿನ ಆಯ್ದ ತಳಿಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ನಡೆಯಿತು. ಬಳಿನ 25ಕ್ಕೂ ಹೆಚ್ಚಿನ ಹಲಸಿನ ಖಾದ್ಯ ವೈವಿಧ್ಯಗಳ ಹಲಸಿನ ಸವಿಯೂಟ ನಡೆಯಿತು.

By Suddi9

Leave a Reply

Your email address will not be published. Required fields are marked *