ಶ್ರೀ ವೆಂಕಟರಮಣ ಸ್ವಾಮಿ ಪ.ಪೂ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅಭಿನಂದನ -ಡಾ.ಪಾಂಡುರಂಗ ನಾಯಕ್
ಶೈಕ್ಷಣಿಕ ಸಾಧನೆಯೇ ಶಿಕ್ಷಣ ಸಂಸ್ಥೆಯ ಪ್ರಗತಿಯ ಸಂಕೇತವಾಗಿದೆ. ನಿರಂತರವಾದ ಕಲಿಕೆಯ ಮೂಲಕ ನಿಶ್ಚಿತ ಗುರಿಮುಟ್ಟಬಹುದು. ವಿದ್ಯಾಥರ್ಿಗಳು ದಾಖಲಿಸುವ ಫಲಿತಾಂಶ ಶಿಕ್ಷಣ ಸಂಸ್ಥೆಯನ್ನು ಬೆಳೆಸುವಲ್ಲಿ ಪೂರಕವಾಗಿರುತ್ತದೆ. ಸ್ಪರ್ಧಾತ್ಮಕವಾದ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಉತ್ತಮ ಫಲಿತಾಂಶ ವಿದ್ಯಾರ್ಥಿಗಳ ಬದುಕನ್ನು ಅರಳಿಸುತ್ತದೆ ಎಂದು ಶ್ರೀ ವೆಂಕಟರಮಣ ಸ್ವಾಮಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಪಾಂಡುರಂಗ ನಾಯಕ್ ಅಭಿಪ್ರಾಯಪಟ್ಟರು.
Merit Students Photo
ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲಿಕೆಗೆ ಪೂರಕವಾದ ಪರಿಸರ ವಿದ್ಯಾಕೇಂದ್ರಗಳಲ್ಲಿ ದೊರೆಯಬೇಕು. ಒಳ್ಳೆಯ ಪರಿಸರ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುತ್ತದೆ.ವಿದ್ಯಾರ್ಥಿಗಳು ತಮಗೆ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಿದ್ದರು. ದ್ವಿತೀಯ ಪಿಯುಸಿಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕಗಳಿಸಿ ಉತ್ತೀರ್ಣ ಹೊಂದಿದ ವಿದ್ಯಾರ್ಥಿ ಗಳಾದ ಗ್ರೀಷ್ಮ ಶಲ್ಮಾ ವೇಗಸ್, ಮೆಲ್ವಿನ್ ವಿಶಾಲ್ ಡಿಸೋಜ, ಸಹನ ಕೆ., ರಮ್ಯಕೃಷ್ಣ, ನಿವೇದಿತಾ ಭಂಡಾರ್ಕರ್, ರಾಜಶ್ರೀ ರಾವ್ ಕೆ., ರಶ್ಮಿತಾ ಎಂ., ಶ್ರೀಲಕ್ಷ್ಮಿಭಟ್, ಅಪೂರ್ವ ಜಿ. ಪ್ರಭು, ಪೂಜಶ್ರೀ ಕೆ., ಮಯೂರಿ ಕಾರಂತ , ಉಮಾ ಎನ್ ಶೆಣೈ, ಶ್ರೀದೇವಿ ಕಾತ್ಯಾಯಿಣಿ ಎನ್., ಅವನಿ ಕೆ.ಎಸ್., ತೃಪ್ತಿ ಭಂಡಾರಿ, ಚೈತನ್ಯ ಎನ್.ಎಂ., ಪಲ್ಲವಿ ಪಿ.ಬಿ., ಇವರನ್ನು ಅಭಿನಂದಿಸಲಾಯಿತು.
ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಬಾಲಕೃಷ್ಣ ಗೌಡ ಕೆ., ಉಪಸ್ಥಿತರಿದ್ದರು. ಉಪನ್ಯಾಸಕ ಪ್ರದೀಪ್ ಪೂಜಾರಿ ಸ್ವಾಗತಿಸಿದರು. ಉಪನ್ಯಾಸಕಿ ಕವಿತಾ ವಂದಿಸಿದರು. ಉಪನ್ಯಾಸಕ ಚೇತನ್ ಮುಂಡಾಜೆ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *