ಬಂಟ್ವಾಳ:   ಬಂಟ್ವಾಳ  ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಅಜಿಲಮೊಗರು ಜುಮ್ಮಾ ಮಸೀದಿಗೆ ದರ್ಗಾ ಝಿಯಾರತ್‍ಗೆಂದು ಬಂದಿದ್ದ ಮಹಿಳೆಯೊಬ್ಬರು ಶುಕ್ರವಾರ ಸಂಜೆ ಶವವಾಗಿ ಪಕ್ಕದ ನೇತ್ರಾವತಿ ನದಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

30btl-ajilamogru

ಮೃತರನ್ನು ಕಲ್ಲಡ್ಕ ನಿವಾಸಿ ದಿ.ಬೇಕರಿ ಇಸುಬು ಎಂಬವರ ಪತ್ನಿ ಬೀಪಾತುಮ್ಮ (45) ಎಂದು ಗುರುತಿಸಲಾಗಿದೆ. ಇವರು ಶುಕ್ರವಾರ ಮಧ್ಯಾಹ್ನದ ಬಳಿಕ ಅಜಿಲಮೊಗರು ದರ್ಗಾ ಝಿಯಾರತ್‍ಗೆ ಬಂದು ಬಳಿಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸಂಜೆ ಸುಮಾರು 6 ಗಂmಗೆ ಮಸೀದಿ ಎದುರಿನ ನೇತ್ರಾವತಿ ನದಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಅಪಾರ ಮಂದಿ ಜಮಾಯಿಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಧಾವಿಸಿ ಸ್ಥಳೀಯರ ಸಹಕಾರದಲ್ಲಿ ಮೃತದೇಹವನ್ನು ಮೇಲೆತ್ತಿರುವುದಾಗಿ ತಿಳಿಸಿದ್ದಾರೆ. .

By Suddi9

Leave a Reply

Your email address will not be published. Required fields are marked *