ಬಂಟ್ವಾಳ:ತಾಲ್ಲೂಕಿನ 57 ಗ್ರಾಮ ಪಂಚಾಯಿತಿನ ಒಟ್ಟು 837 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ತಾಲ್ಲೂಕಿನಲ್ಲಿ ಒಟ್ಟು 55 ಸೂಕ್ಷ್ಮ, 58 ಅತಿಸೂಕ್ಷ್ಮ, 198 ಸಾಮಾನ್ಯ, ಎರಡು ಹೆಚ್ಚುವರಿ ಹೀಗೆ ಒಟ್ಟು 313 ಮತಗಟ್ಟೆಗಳಲ್ಲಿ ಭಾರೀ ಪೊಲೀಸ್ ಬಂದೋಬಸ್ತಿನಲ್ಲಿ ಒಟ್ಟು 1,398 ಮಂದಿ ತರಬೇತಿ ಹೊಂದಿದ ಸಿಬ್ಬಂದಿಗಳು ಚುನಾವಣೆ ಯಶಸ್ವಿಯಾಗಿ ನಡೆಸುವಲ್ಲಿ ಶ್ರಮಿಸಿದ್ದಾರೆ.

ಕಲ್ಲಡ್ಕ ಸಮೀಪದ ಗೋಳ್ತಮಜಲು ಮತಗಟ್ಟೆಯಲ್ಲಿ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಶುಕ್ರವಾರ ಮತ ಚಲಾಯಿಸಿದರು.

1 (1)

9

mohandas swami1

mohandas swam3

11

9 (1)

10 (1)

7

7 (1)

6

ಬಹುತೇಕ ಮತಗಟ್ಟೆಗಳಲ್ಲಿ

ಬೆಳಿಗ್ಗೆ ಮತ್ತು ಸಂಜೆ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಕಂಡು ಬಂದಿದ್ದು, ಮಧ್ಯಾಹ್ನತನಕ ಶೇ.40ರಷ್ಟು ಮತದಾನವಾಗಿತ್ತು. ವಿವಿಧ ಖಾಸಗಿ ವಾಹನಗಳ ಮೂಲಕ ಮತದಾರರನ್ನು ಕರೆತರುವ ದೃಶ್ಯ ಸಾಮಾನ್ಯವಾಗಿದ್ದು, ಸಜಿಪಮೂಡ ಮತ್ತು ತುಂಬೆ ಮತಗಟ್ಟೆಯಲ್ಲಿ ಕೆಲವೊಂದು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಾಲ್ಲೂಕಿನ ಕೊಯಿಲ, ಸೋರ್ನಾಡು, ನಂದಾವರ, ಗೋಳ್ತಮಜಲು, ಸಜಿಪಮೂಡ, ತುಂಬೆ ಮತ್ತಿತರ ಮತಗಟ್ಟೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ದಂಡು ಕಾಣಿಸಿದೆ.
ಈ ಬಾರಿ ಹೆಚ್ಚುವರಿಯಾಗಿ 12 ಹೊಸ ಗ್ರಾಮ ಪಂಚಾಯಿತಿಗೆ ನಡೆದ ಪ್ರಥಮ ಚುನಾವಣೆಯಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂಡಿರುವುದು ಕಂಡು ಬಂದಿದೆ.

 

ಅರಳದಲ್ಲಿ ಈ ಬಾರಿ ಅಸ್ತಿತ್ವಗೊಂಡ ಹೊಸ ಅರಳ ಗ್ರಾಮ ಪಂಚಾಯಿತಿ ಪ್ರಥಮ ಚುನಾವಣೆಯಲ್ಲಿ ವಯೋವೃದ್ಧ ಮುಸ್ಲಿಂ ಮಹಿಳೆಯೊಬ್ಬರು ಶುಕ್ರವಾರ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸುತ್ತಿರುವ ದೃಶ್ಯ.

ಕೊಳಕ್ಕೀರು ನಿವಾಸಿ ಜಯಂತಿ ಮಡಿವಾಳ ಎಂಬವರ ವಿವಾಹವು ಶ್ರೀಧರ ಮಡಿವಾಳ ಎಂಬವರೊಂದಿಗೆ ಬೆಳ್ತಂಗಡಿಯಲ್ಲಿ ಶುಕ್ರವಾರ ನಡೆಯಲಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ ದಿಬ್ಬಣ ಹೊರಡುವ ವೇಳೆ ಗೋಳ್ತಮಜಲು ಮತಗಟ್ಟೆಯಲ್ಲಿ ಮತದಾನ ಮಾಡಿದರು.
ವಾಮದಪದವು ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಶುಕ್ರವಾರ ಮದ್ಯದ ಅಂಗಡಿಗಳು ಬಂದ್ ಆಗಿದ್ದರೂ ವ್ಯಕ್ತಿಯೊಬ್ಬರು ಇಲ್ಲಿನ ರಾಜೀವ ಗಾಂಧಿ ವೃತ್ತದ ಬಳಿ ಶುಕ್ರವಾರ ಮಧ್ಯಾಹ್ನ ಕಂಠಪೂತರ್ಿ ಕುಡಿದು ರಸ್ತೆಯಲ್ಲಿ ಬಿದ್ದಿರುವುದು ಕಂಡು ಬಂದಿದೆ.

ವಿವಿಧೆಡೆ ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಕೆಲವೊಂದು ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಎಸ್ಪಿ ಡಾ.ಶರಣಪ್ಪ ನೇತೃತ್ವದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

By Suddi9

Leave a Reply

Your email address will not be published. Required fields are marked *