ಬಂಟ್ವಾಳ: ಈ ದೇಶದಲ್ಲಿ ಪ್ರಜಾಪ್ರಭುತ್ವ, ಸಮಾನತೆ, ಜಾತ್ಯಾತೀತತೆ ಉಳಿಯಬೇಕಾದರೆ ಕೋಮುವಾದ ಅಳಿಯಬೇಕಾದುದು ಅನಿವಾರ್ಯವಾಗಿದೆ. ಆದರೆ ಇಲ್ಲಿ ಸಂಘಪರಿವಾರ ತಮ್ಮ ರಾಜಕೀಯ ಲಾಭಕ್ಕಾಗಿ ಕೋಮು ವಿಷ ಬೀಜವನ್ನು ಜನರ ನಡವೆ ಹರಡಿ ಕೋಮುಗಲಬೆ ನಡೆಸಿ ಜನರ ಮನಸ್ಸುಗಳನ್ನು ಬೇರ್ಪಡಿಸುತ್ತಿವೆ. ಒಡೆದ ಮನಸ್ಸುಗಳನ್ನು ಜೋಡಿಸಲು ಮತ್ತು ಜನರಿಗೆ ಉಜ್ವಲ ಭವಿಷ್ಯವನ್ನು ರೂಪಿಸುವ ಸಲುವಾಗಿ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ದೇಶದಾದ್ಯಂತ ಜನ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ಹೇಳಿದರು.

ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಬಂಟ್ವಾಳ ವಲಯದ ವತಿಯಿಂದ “ಉಜ್ವಲ ಭವಿಷ್ಯಕ್ಕಾಗಿ ಒಂದಾಗೋಣ” ಎಂಬ ಶೀರ್ಷಿಕೆ ಅಡಿಯಲ್ಲಿ ಗೂಡಿನ ಬಳಿಯ “ಶಹೀದ್ ಇಕ್ಬಾಲ್” ವೇದಿಕೆಯಲ್ಲಿ ಜರಗಿದ “ಜನ ಸಂಗಮ 2015” ಇದರ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಪಾಣೆಮಂಗಳೂರು ಅಧ್ಯಕ್ಷರಾದ ಅಬ್ದುಲ್ ಖಾದರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಸಮೀತಿ ಸಧಸ್ಯರುಗಳಾದ ಮಹಮ್ಮದ್ ವಳವೂರು, ಮೊಹಮ್ಮದ್ ಇಕ್ಬಾಲ್, ಅಸ್ಲಮ್ ಹಸನ್, ತಾಲೂಕ್ ಅಧ್ಯಕ್ಷರಾದ ಝಕರಿಯ ಕಲ್ಲಡ್ಕ, ಕಾರ್ಯದರ್ಶಿಯಾದ ಸಲೀಮ್ ಕೆ, ವಲಯ ಅಧ್ಯಕ್ಷರಾದ ಇಜಾಝ್ ಅಹ್ಮದ್,ಪುರಸಭೆ ಸದಸ್ಯರಾದ ಮೊನಿಶ್ ಅಲಿ, ಹಾಗೂ ಸಂಘಟನಾ ಪ್ರಮುಖರಾದ ಯಾಕೂಬ್ ಬಂಟ್ವಾಳ, ರಪೀಕ್ ಟಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹಮ್ಮದ್ ರಿಝ್ವಿ ಸ್ವಾಗತಿಸಿದರು, ರಫೀಕ್ ಎಮ್.ಕೆ ವಂದಿಸಿದರು, ರಿಯಾಝ್ ವಂದಿಸಿದರು.
