ಮೂಡುಬಿದರೆ: ಪ.ಪೂ ಶಿಕ್ಷಣ ಇಲಾಖೆಯು ನಡೆಸಿದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಮೂಡುಬಿದಿರೆಯ ಜೈನ ಪ.ಪೂ.ಕಾಲೇಜಿನ ವಿಜ್ಞಾನ ವಿಭಾಗದಲ್ಲಿ 93 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಎಲ್ಲಾ ವಿದ್ಯಾರ್ಥಿಗಳು ಪಾಸಾಗುವ ಮೂಲಕ ಶೇ 100 ಫಲಿತಾಂಶವನ್ನು ದಾಖಲಿಸಿ ಮೂಡುಬಿದರೆ ವಲಯದಲ್ಲಿ ಶೇ 100ಫಲಿತಾಂಶ ಪಡೆದ ಏಕೈಕ ವಿದ್ಯಾಸಂಸ್ಥೆಯಾಗಿದೆ.
ವಾಣಿಜ್ಯ ವಿಭಾಗದಲ್ಲಿ 239 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 232 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 97.07 ಹಾಗೂ ಕಲಾ ವಿಭಾಗದಲ್ಲಿ 42 ವಿದ್ಯಾರ್ಥಿಗಳು ಹಾಜರಾಗಿ 41 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಶೇ 97.61 ಹೀಗೆ ಒಟ್ಟು 374 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 366 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 97.86 ಫಲಿತಾಂಶವನ್ನು ದಾಖಲಿಸಿದ್ದಾರೆ.

51 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪವಿತ್ರ ಕಾರಂತ್ಗೆ 573 (95.50%), ಕಾಮರ್ಸ್ ವಿಭಾಗದಲ್ಲಿ ವರ್ಷಾ ತಂತ್ರಿಗೆ 568 (94.67%) ಹಾಗೂ ಆಟ್ರ್ಸ್ ವಿಭಾಗದಲ್ಲಿ ಡಿಯೋನಾ ರೋಜ್ ಸಾಜಿ 536 (89.33%) ಅಂಕಗಳನ್ನು ಪಡೆದು ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ನೂರು ಅಂಕ ಪಡೆದ ವಿದ್ಯಾರ್ಥಿಗಳು:
ವರ್ಷಾ ತಂತ್ರಿ (ವ್ಯವಹಾರ ಅಧ್ಯಯನ ಮತ್ತು ಸಂಖ್ಯಾಶಾಸ್ತ್ರ), ಸುನೈನಾ ಬಾನು( ವ್ಯವಹಾರ ಅಧ್ಯಯನ ಮತ್ತು ಲೆಕ್ಕಶಾಸ್ತ್ರ), ಪಿಯೋಲಾ ಪಿಂಟೋ(ವ್ಯವಹಾರ ಅಧ್ಯಯನ), ರೆನಿಟಾ ಪಿಂಟೋ (ವ್ಯವಹಾರ ಅಧ್ಯಯನ), ರಶ್ಮಿತಾ (ವ್ಯವಹಾರ ಅಧ್ಯಯನ), ವಿನ್ಯಾಶ್ ಶೆಟ್ಟ (ಸಂಖ್ಯಾಶಾಸ್ತ್ರ), ಸುಮುಖ್ ಪಿ (ಗಣಕ ವಿಜ್ಞಾನ), ಸುರಕ್ಷಾ (ಗಣಕ ವಿಜ್ಞಾನ), ಶ್ರುತ ಜೈನ್ (ಲೆಕ್ಕಶಾಸ್ತ್ರ), ಸ್ವಾತಿ (ಲೆಕ್ಕಶಾಸ್ತ್ರ) ಹಾಗೂ ವರ್ಣಶ್ರೀ ಲೆಕ್ಕಶಾಸ್ತ್ರದಲ್ಲಿ ನೂರು ಅಂಕಗಳನ್ನು ಪಡೆದಿದ್ದಾರೆ.
