ವಿಜ್ಞಾನದಲ್ಲಿ ಅವಿಭಜಿತ ಜಿಲ್ಲೆಗೆ ಪ್ರಥಮ ಶೇ. 99.63 ಫಲಿತಾಂಶ
ಮೂಡುಬಿದರೆ: ಸಾಂಸ್ಕ್ರತಿಕ, ಕ್ರೀಡಾ ಸಾಧನೆಗಳ ಮೂಲಕ ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪಾತ್ರವಾಗಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಪಿಯು ಕಾಲೇಜು ಕಳೆದ ಐದು ವರ್ಷಗಳಿಂದ 99 ಶೇ.ಕ್ಕಿಂತ ಅಧಿಕ ಫಲಿತಾಂಶ
ದಾಖಲಿಸಿದ್ದು, ಈ ಬಾರಿಯೂ ಶೇ. 99.63 ಫಲಿತಾಂಶ ಪಡೆಯುವುದರ ಮೂಲಕ ಸಾಧನೆ ಮಾಡಿದೆ.

ಆಳ್ವಾಸ್‍ನ ಮೋನಿಸ್ ಉತ್ತಪ್ಪ, ವಂದನಾ ಎಂ. ವಿಜ್ಞಾನ ವಿಭಾಗದಲ್ಲಿ 592 ಅಂಕ( ಶೇ. 98.67) ಅಂಕ ಪಡೆದು ಅವಿಭಜಿತ ದ.ಕ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 7 ಜನ, ವಾಣಿಜ್ಯ ವಿಭಾಗದಲ್ಲಿ 2 ಜನ ಸಹಿತ ಒಟ್ಟು 9 ಜನ 590ಕ್ಕೂ ಅಧಿಕ ಅಂಕ ಗಳಿಸಿದ್ದಾರೆ. ಆಳ್ವಾಸ್ ಕಾಲೇಜಿನಲ್ಲಿ ಒಟ್ಟು 4076 ಮಂದಿ ಪರೀಕ್ಷೆ ಬರೆದಿದ್ದು, 4061 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 3,212 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 3,200 ವಿದ್ಯಾರ್ಥಿಗಳು ಪಾಸಾಗುವುದರ ಮೂಲಕ 99.59 ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗದಲ್ಲಿ 785 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 783 ಮಂದಿ ಉತ್ತೀರ್ಣರಾಗುವ ಮೂಲಕ 99.74 ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ ಕಾಲೇಜಿನ ಹಾಜರಾದ 78 ವಿದ್ಯಾರ್ಥಿಗಳೂ ಉತ್ತೀರ್ಣರಾಗುವ ಮೂಲಕ ಶೇ. 100 ಫಲಿತಾಂಶ ಪಡೆದು ಸಾಧನೆ ಮಾಡಿದ್ದಾರೆ.
ಶೇ.95ಕ್ಕಿಂತ ಅಧಿಕ 378, ಶೇ.90ಕ್ಕಿಂತ ಅಧಿಕ 1473, ಶೇ.85ಕ್ಕಿಂತ ಅಧಿಕ 2,790, ಪ್ರಥಮ ಶ್ರೇಣಿಯಲ್ಲಿ 1595, ದ್ವಿತೀಯ ಶ್ರೇಣಿಯಲ್ಲಿ 50 ವಿದ್ಯಾರ್ಥಿಗಳು ಹಾಗೂ 5 ವಿದ್ಯಾರ್ಥಿಗಳು ಶೇ.50 ಅಂಕಗಳನ್ನು ಪಡೆದಿದ್ದಾರೆ.
ಸಾಧಕರ ವಿವರ:
ವಿಜ್ಞಾನ ವಿಭಾಗದಲ್ಲಿ ಮೋನಿಶ್ ಉತ್ತಪ್ಪ 592 ಅಂಕ ಪಡೆದಿದ್ದಾರೆ. ರಸಾಯನ ಶಾಸ್ತ್ರ ಗಣಿತ, ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ತಲಾ 100 ಅಂಕಗಳು, ಕನ್ನಡ-98, ಇಂಗ್ಲೀಷ್-95, ಬೌತಶಾಸ್ತ್ರ-99 ಅಂಕಗಳನ್ನು ಪಡೆದು ಶೇ. 98.6 ಅಂಕ ಗಳಿಸಿದ್ದಾರೆ. ಇದೇ ವಿಭಾಗದಲ್ಲಿ ಮೂಡುಬಿದರೆ ನಿವಾಸಿ, ಆಳ್ವಾಸ್ ವಿದ್ಯಾರ್ಥಿನಿ ವಂದನಾ ಕೂಡ 592 ಅಂಕ ಪಡೆದಿದ್ದು, ಬೌತಶಾಸ್ತ್ರ, ಗಣಿತ, ಜೀವಶಾಸ್ತ್ರ, ರಸಾಯನ ಶಾಸ್ತ್ರದಲ್ಲಿ ತಲಾ 100 ಅಂಕ, ಸಂಸ್ಕ್ರತ-99 ಹಾಗೂ ಇಂಗ್ಲೀಷ್‍ನಲ್ಲಿ 93 ಅಂಕ ಗಳಿಸಿದ್ದಾರೆ. ವಿಜ್ಞಾನದಲ್ಲಿ ಅಕ್ಷಯ ಕುಮಾರ್ ಎನ್.ವಿ 591 (ಶೇ.98.50) ಪಡೆದಿದ್ದಾರೆ. ಅಜಯ್ ಕುಮಾರ್ ಎಸ್., ಅಶ್ವಿನ್ ಕುಮಾರ್ ವಿ., ಎನ್.ಎಂ ನವ್ಯಶ್ರೀ, ಸಹಾನ ವಿ.ಎನ್, ವಾಣಿಜ್ಯ ವಿಭಾಗದಲ್ಲಿ ಪ್ರಸನ್ನ ಸುಬ್ರಾಯ ಹೆಗ್ಡೆ ಹಾಗೂ ವರ್ಣ.ಕೆ ತಲಾ 590(98.33) ಅಂಕ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಹೇಮಾವತಿ ಶೆಟ್ಟಿ ಹಾಗೂ ರಮ್ಯ ಶಿವಾನಂದ ಬೆಳಗೇರಿ 556 (ಶೇ.92.67) ಅಂಕ ಗಳಿಸಿದ್ದಾರೆ.
ಕ್ರೀಡಾಪಟುಗಳ ಸಾಧನೆ:
ಆಳ್ವಾಸ್ ಪಿಯು ಕಾಲೇಜಿನ 78 ಕ್ರೀಡಾ ವಿದ್ಯಾರ್ಥಿಗಳಲ್ಲರೂ ಉತ್ತೀರ್ಣರಾಗಿದ್ದು, ಕ್ರೀಡೆ ಮಾತ್ರವಲ್ಲ ಶೈಕ್ಷಣಿಕವಾಗಿಯೂ ಸಾಧನೆ ಮಾಡಬಲ್ಲವು ಎನ್ನುವುದನ್ನು ಸಾಬೀತುಗೊಳಿಸಿದ್ದಾರೆ. ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪವರ್ ಲಿಫ್ಟ್‍ಂಗ್‍ನಲ್ಲಿ ಸ್ವರ್ಣ ವಿಜೇತೆ ಮರೀನಾ ದೇವಿ ಶೇ.75.5 ಅಂಕ ಗಳಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ 24, ರಾಜ್ಯ ಮಟ್ಟದಲ್ಲಿ 36 ಪದಕ ಪಡೆದ ಕ್ರೀಡಾಪಟುಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ವೈದ್ಯೆಯಾಗುವಾಸೆ:
592 ಅಂಕಗಳೊಂದಿಗೆ ವಿಜ್ಞಾನ ವಿಭಾಗದಲ್ಲಿ ಅವಿಭಜಿತ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿರುವ ವಂದನಾ.ಎಂ ಆಳ್ವಾಸ್ ಪಿಯು ಕಾಲೇಜಿನಲ್ಲಿ ದತ್ತು ಸ್ವೀಕಾರಡಡಿ ಶಿಕ್ಷಣ ಪಡೆದಿದ್ದಾರೆ. ಈಕೆ ಕಾರ್ಕಳದ ವಿದ್ಯಾದರ ಪ್ರಭು-ಸುಧಾ ದಂಪತಿ ಪುತ್ರಿ. ವೈದ್ಯಕೀಯ ಶಿಕ್ಷಣ ಪಡೆದು, ವೈದ್ಯೆಯಾಗುವ ಹಂಬಲ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ 38,363 ಮಂದಿ ಶೇ.85 ಹೆಚ್ಚು ಗಳಿಸಿದ್ದು, ಅದರಲ್ಲಿ 2,790 ಇರುವುದು ಹೆಮ್ಮೆಯ ವಿಷಯ. ಕಾಲೇಜು ಪ್ರಾರಂಭ 15 ವರ್ಷಗಳಲ್ಲೇ ಈ ಬಾರಿಯದ್ದು ಉತ್ತಮ ಫಲಿತಾಂಶ. ಗ್ರಾಮೀಣ ಪ್ರದೇಶದಿಂದ ಬಂದಂತಹ ವಿದ್ಯಾರ್ಥಿಗಳಾಗಿದ್ದರೂ ಕೂಡ ಕಳೆದ 12 ವರ್ಷಗಳಲ್ಲಿ ಇಂಗ್ಲೀಷ್ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಿಸಿರುವುದು ಸಂತಸ ತಂದಿದೆ.
