ಮೂಡುಬಿದರೆ : ಕರ್ನಾಟಕ ಸರ್ಕಾರದ ಕೊಳಚೆ ನಿರ್ಮೂಲನ ಮಂಡಳಿಯಿಂದ ಮೂಡುಬಿದರೆಯ ಗಾಂಧಿನಗರ ಕಡದಬೆಟ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲನಿಯ ರಸ್ತೆ ಕಾಂಕ್ರಿಟೀಕರಣಕ್ಕಾಗಿ 15 ಲಕ್ಷ ಮಂಜೂರಾಗಿದ್ದು, ಗುದ್ದಲಿ ಪೂಜೆ ನೆರವೇರಿಸಲಾಯಿತು.
ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಬುಧವಾರ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಅತೀ ಹೆಚ್ಚು ದಲಿತರು ವಾಸವಾಗಿರುವ ಪ್ರದೇಶ ಇದಾಗಿರುವುದರಿಂದ ಈ ರಸ್ತೆಯನ್ನು ಸುಮಾರು 1ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಅಗತ್ಯವಿದೆ. ಇನ್ನಷ್ಟು ಹೆಚ್ಚಿನ ಅನುದಾನದಿಂದ ಈ ಭಾಗಗಳ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್ ಪುರಸಭಾಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ವಾರ್ಡ್ ಸದಸ್ಯ ಕೊರಗಪ್ಪ, ನಾಮನಿರ್ದೇಶಿತ ಸದಸ್ಯ ಇಕ್ಬಾಲ್ ಕರೀಮ್, ಗುತ್ತಿಗೆದಾರ ಗಿರೀಶ್ ಉಪಸ್ಥಿತರಿದ್ದರು.

mbd_may15_ 3

By Suddi9

Leave a Reply

Your email address will not be published. Required fields are marked *