ಬಂಟ್ವಾಳ: ಮೊದಲ ಮಳೆಗೇ ಬಿ.ಸಿ.ರೋಡಿನ ಅಸಲಿ ಬಣ್ಣ ಬಯಲಾಗಿದೆ. ಇಲ್ಲಿನ ಸರ್ವೀಸ್ ರಸ್ತೆಯಲ್ಲಿರುವ ಮಾರಣಾಂತಿಕ ಹೊಂಡಗಳು ಬಾಯಿಬಿಟ್ಟದ್ದು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಟ್ರಾಫಿಕ್ ಜಾಮ್ ನ ಮುಖ್ಯ ಕಾರಣ ಬಯಲಾಗಿದೆ. ಬಿ.ಸಿ.ರೋಡಿಗೆ ಟ್ರಾಫಿಕ್ ಪೊಲೀಸರು ಬಂದರೂ ದಿನ ಪೂರ್ತಿ ಟ್ರಾಫಿಕ್ ಜಾಮ್ ತಪ್ಪಿಲ್ಲ ಎನ್ನುವುದು ಸದ್ಯಕ್ಕೆ ಬಿಸಿರೋಡಿನ ಜನತೆಯ ಅಳಲು. ಇದಕ್ಕೆ ಸದ್ಯದ ಮುಖ್ಯ ಕಾರಣ ಸಮಸ್ಯೆಗೆ ರೈಲ್ವೆ ಮೇಲ್ಸೆತುವೆ ಕಾಮಗಾರಿಯವರ ಬೇಜವಬ್ದಾರಿ ಕೆಲಸ.
ಇಲ್ಲಿನ ರೈಲ್ವೆ ಮೇಲ್ಸೆತುವೆ ಕಾಮಗಾರಿಯ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಅರ್ದ ಕಬಳಿಸಿರುವುದು ಮಾತ್ರವಲ್ಲದೆ, ವಾಹನ ಸಂಚಾರಕ್ಕೂ ನಿತ್ಯ ಅಡಚನೆ ಉಂಟುಮಾಡುತ್ತಿದೆ. ಜೊತೆಗೆ ಕಿರಿದಾಗಿರುವ ಸರ್ವೀಸ್ ರಸ್ತೆಯ ದೊಡ್ಡ ದೊಡ್ಡ ಹೊಂಡಗಳು ವಾಹನಸವಾರರಿಗೆ ಪ್ರಾಣಭಯವನ್ನೇ ಉಂಟುಮಾಡುತ್ತಿದೆ. ಮೇಲ್ಸೇತುವೆ ಕಾಮಗಾರಿಗೆ ಹಾಕಿರುವ ಮಣ್ಣು ಹೆದ್ದಾರಿಯುದ್ದಕ್ಕೂ ಹರಡಿಕೊಂಡಿದ್ದು, ಬಿ.ಸಿ.ರೋಡು ಸಂಪೂರ್ಣ ಕೆಸರು ಮಯವಾಗಿದೆ.
ರಸ್ತೆಯ ಬದಿಯಲ್ಲಿ ಮಣ್ಣು ಹಾಕಲಾಗಿದೆ. ರಸ್ತೆಯ ತುಂಬ ಮಣ್ಣು ಇದ್ದು ವಾಹನ ಸಂಚಾರ ಮಾಡುವರಿಗೆ ದೂಳಿನಿಂದ ಸಂಚಾರ ಮಾಡಲು ಅಸಾಧ್ಯ ವಾಗುತ್ತಿದೆ . ರಸ್ತೆಗೆ ಹಾಕಲಾದ ಮಣ್ಣು ದಿಬ್ಬದಾಕರದಲ್ಲಿದ್ದು ವಾಹನಗಳು ಡ್ಯಾನ್ಸ್ ಮಾಡುತ್ತಾ ಹೊಗಬೇಕಾದ ಪರಿಸ್ಥಿತಿ. ರಸ್ತೆಯ ಬದಿಯ ತಡೆಗೋಡೆ ಕೂಡಾ ಸರಿಯಾಗಿ ಮಾಡದೇ ಇರುವುದರಿಂದ ಮಳೆ ಆರಂಭವಾದರೆ ಇಲ್ಲಿನ ಹೆದ್ದಾರಿಯ ಸಂಚಾರ ಕಡಿತ ಆಗುವ ಸಂಭವ ಕೂಡಾ ಇದೆ. ದ್ವಿಚಕ್ರವಾಹನಗಳಿಗಂತೂ ಈ ಮಣ್ಣ ರಾಶಿಯನ್ನು ದಾಟಿ ಹೋಗುವುದು ಒಂದು ದೊಡ್ಡ ಸಾಹಸದಂತಾಗಿದೆ. ಒಟ್ಟಿನಲ್ಲಿ ಮೊದಲ ಮಳೆಗೇ ಬಿ.ಸಿ.ರೋಡು ಕೆಸರ್ ರೋಡು ಆಗಿರುವುದು ದುರದೃಷ್ಟಕರ..!








