ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಬಳಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮತ್ತು ತಂತಿ ತುಂಡಾಗಿ ಹಾನಿ ಉಂಟಾದ ಘಟನೆ ಬುಧವಾರ ನಡೆದಿದೆ.
ಇಲ್ಲಿನ ದೂರವಾಣಿ ವಿನಿಮಯ ಕೇಂದ್ರದ ಎದುರು ಭಾಗದಲ್ಲಿರುವ ವಿದ್ಯುತ್ ಪರಿವರ್ತಕದಿಂದ ಸಂಪರ್ಕ ವಿಭಜಿಸುವ ಎರಡು ಕಂಬಗಳಿಗೆ ಪುಂಜಾಲಕಟ್ಟೆ ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಹೋಗುತ್ತಿದ್ದ ಕಾರೊಂದು ಬುಧವಾರ ಬೆಳಗ್ಗೆ ಢಿಕ್ಕಿ ಹೊಡೆದಿತ್ತು . ಇದರಿಂದಾಗಿ ಒಂದು ಕಂಬ ಮುರಿದು ಬಿದ್ದು, ಇನ್ನೊಂದು ಕಂಬ ಬಾಗಿ ತಂತಿಗಳ ಆಧಾರದಲ್ಲಿ ಜೋತಾಡುತ್ತಿದೆ. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಅಪಘಾತ ನಡೆದ ಕೂಡಲೇ ಕಾರು ಚಾಲಕ ಕಾರು ಸಹಿತ ಪಲಾಯನ ಮಾಡಿದ್ದು, ಕೆಳಗಿನ ವಗ್ಗಕ್ಕೆಬರುವಷ್ಟರಲ್ಲಿ ಕಾರು ಕೆಟ್ಟು ನಿಂತಿದೆ. ಮೆಸ್ಕಾಂಗೆ ಉಂಟಾದ ರೂ 40ಸಾವಿರ ಮೊತ್ತದ ನಷ್ಟವನ್ನು ಕಾರು ಚಾಲಕನಿಂದಲೇ ಪಡೆದುಕೊಳ್ಳುವುದಾಗಿ ಕಿರಿಯ ಇಂಜಿನಿಯರ್ ರಂಗಸ್ವಾಮಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *