ಬಂಟ್ವಾಳ : ಉಳಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘ (ರಿ.) ಇದಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾದ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಕರ್ನಾಟಕ ಸರಕಾರದ ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ಬಿ.ಪದ್ಮಶೇಖರ್ ಜೈನ್, ಅಕ್ರಮ – ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲಿಯಾನ್, ಪಂಚಾಯತ್ ಅಧ್ಯಕ್ಷ ಚೆನ್ನಪ್ಪ ಸಾಲಿಯಾನ್ ಸದಸ್ಯರಾದ ಸಂಜೀವ ಗೌಡ, ಅಬ್ದುಲ್ ರಹಿಮಾನ್, ಸಂಘದ ಗೌರವಾಧ್ಯಕ್ಷ ಅಣ್ಣು ಕಕ್ಯಖಂಡಿಗ, ಅಧ್ಯಕ್ಷರಾದ ಸುರೇಶ್ ಡಿ, ಸದಸ್ಯರಾದ ರಾಜೀವ್ ಕಕ್ಯಪದವು, ಚೆನ್ನಪ್ಪ ಮಾಡೋಡಿ, ಸಾಹಿತಿ ಸತೀಶ್, ರಾಜು ಮಾಡೋಡಿ ಮೊದಲಾದವರು ಉಪಸ್ಥಿತರಿದ್ದರು.
