ಕರ್ನಾಟಕ ಸರಕಾರದ ನಬಾರ್ಡ್ 20 ಯೋಜನೆಯಡಿಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರಕ್ಕೆ ರಸ್ತೆಗಳ ಅಭಿವೃಧ್ಧಿಗೆ ರೂ. 3.30ಕೋಟಿ ರೂ ಮಂಜೂರು ಮಾಡಲಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ತಿಳಿಸಿದರು.

ಅವರು ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿದ್ದಕಟ್ಟೆ- ಹೊಕ್ಕಾಡಿಗೋಳಿ ರಸ್ತೆಯ ಮರು ಡಾಮರೀಕರಣದ ಶಂಕು ಸ್ಥಾಪನೆ ನೆರವೇರಿಸಿ ರೂ.50ಲಕ್ಷ ರೂ. ವೆಚ್ಚದಲ್ಲಿ 2.8ಕಿ.ಮೀ ಸದ್ರಿ ರಸ್ತೆಯನ್ನು ಅಗಲೀಕರಣ ಮತ್ತು ಮರು ಡಾಮರೀಕರಣ ಮಾಡಲಾಗುವುದು ಎಂದು ತಿಳಿಸಿದರು. ಹಾಗೂ ಪ್ರಮುಖ 3-4 ಜಿಲ್ಲಾ ಪಂಚಾಯತ್ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಯಡಿ ಸಂಪೂರ್ಣ ಅಗಲೀಕರಣ ಮತ್ತು ಮರು ಡಾಮರೀಕರಣಕ್ಕೆ ಪ್ರಸ್ತಾಪ ಸಲ್ಲಿಸಲಾಗಿದ್ದು ಇದರಲ್ಲಿ ಸಿದ್ದಕಟ್ಟೆ- ಕರ್ಪೆ- ಅಣ್ಣಳಿಕೆ 13ಕಿ.ಮೀ ರಸ್ತೆ ಸೇರಿಸಲಾಗಿದೆ ಎಂದರು.

DSC_0155
ಸಿದ್ದಕಟ್ಟೆ- ಹೊಕ್ಕಾಡಿಗೋಳಿ ರಸ್ತೆಯ ಬಗ್ಗೆ ಸಾರ್ವಜನಿಕರ ಬಹು ಕಾಲದ ಬೇಡಿಕೆಯನ್ನು ಈಡೇರಿಸಿಕೊಟ್ಟ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾರ್ವಜನಿಕರ ಪರವಾಗಿ ಸಂಗಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಭಾಕರ ಪ್ರಭು ಈ ಸಂಧರ್ಭದಲ್ಲಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸುಶೀಲಾ, ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಅಕ್ರಮ- ಸಕ್ರಮ ಸಮಿತಿ ಅಧ್ಯಕ್ಷರಾದ ಕೆ.ಮಾಯಿಲಪ್ಪ ಸಾಲ್ಯಾನ್, ಜಿ.ಪಂ. ಇಂಜಿನಿಯರ್ ಜಗದೀಶ್ ನಿಂಬಾಳ್ಕರ್, ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಪದ್ಮನಾಭ ವಿ.ಸಾಲ್ಯಾನ್, ಸಂಗಬೆಟ್ಟು ಗ್ರಾ.ಪಂ ಸದಸ್ಯರಾದ ಹೆಚ್.ಉಮ್ಮರ್ ಫಾರೂಕ್, ಆರಂಬೋಡಿ ಗ್ರಾ.ಪಂ ಸದಸ್ಯರಾದ ರಮೇಶ್ ಮಂಜಿಲ ಪ್ರಮುಖರಾದ ಸುರೇಶ್ ಶೆಟ್ಟಿ ಪೂವಳ, ಬಿ.ಶಿವಾನಂದ ರೈ, ಭುಜಬಳಿ ಕಂಬಳಿ, ಸೀತರಾಮ ಶೆಟ್ಟಿ, ಅಶೋಕ ಆಚಾರ್ಯ, ಅಂತೋನಿ ಡಿ`ಸೋಜ, ಹರೀಶ್ ಹಿಂಗಾಣಿ, ನಾಸೀರ್ ಹೊಕ್ಕಾಡಿ, ವೆಂಕಟ ನಾಯಕ್, ಯಶೋದರ ಪೂಜಾರಿ ನಂದಗೋಕುಲ, ರೋಬರ್ಟ್ ಮೋರಸ್, ದಿನೇಶ್ ಶೆಟ್ಟಿಗಾರ್, ಉಮೇಶ್ ಶೆಟ್ಟಿ ಕೊನರೊಟ್ಟು, ಮಾಹಾವೀರ್ ಜೈನ್ ನಡ್ಯೋಡಿ, ಜಯಕರ ಶೆಟ್ಟಿ, ಸುಧೀಂಧ್ರ ಶೆಟ್ಟಿ, ನವೀನ ಮಂಜಿಲ, ಸಂಜೀವ ಪೂಜಾರಿ ಮಣಿಪಾಲ್, ದಾಮೋದರ ಪೂಜಾರಿ ದೋಟ, ವಿಜಯರಾಜ್ ಜೈನ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *