ಸುದ್ದಿ9 ಕೈಕಂಬ: ಸ್ಕಂದಶ್ರೀ ಸೇವಾ ಸಮಿತಿ (ರಿ) ಸ್ಕಂದನಗರ ಗುರುಪುರ ಕೈಕಂಬ ಇದರ ವತಿಯಿಂದ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಇತ್ತೀಚೆಗೆ ಸ್ಕಂದನಗರದಲ್ಲಿ ಅರ್ಚಕರಾದ ಶ್ರೀ ಸುರೇಶ್ ಭಟ್ ಕಂದಾವರ ಇವರ ನೇತೃತ್ವದಲ್ಲಿ ವಿಂಜೃಭಣೆಯಿಂದ ನಡೆಯಿತು.
ಬೆಳಿಗ್ಗೆ ಗಣಹೋಮ, ಭಜನೆ, ಮಹಾಪೂಜೆ , ನಂತರ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮವಾಗಿ ಸ್ಕಂದನಗರದಲ್ಲಿ ದಿ.ಶಿವಪ್ಪ ಬಂಗೇರ ಇವರ ಸ್ಮರಣಾರ್ಥಕವಾಗಿ ಅವರ ಪುತ್ರ ಬಾಲಕೃಷ್ಣ ಸಾಲ್ಯಾನ್ ಇವರು ಸೇವಾ ಮನೋಭಾವದಿಂದ ಕೊಡುಗೆಯಾಗಿ ನೀಡಿದ “ಗೋ ಜಲಾಶಯ”ವನ್ನು ಕೈಕಂಬದ ಉದ್ಯಮಿ ಶ್ರೀ ಎಂ ಹರಿರಾವ್ ಇವರು ಉದ್ಘಾಟಿಸಿದರು ಮತ್ತು ಸತ್ಯನಾರಾಯಣ ಪೂಜಾ ವೃತವನ್ನು ಶ್ರೀ ವಾದಿರಾಜ ಕಲ್ಲುರಾಯ ವಿವರಿಸಿದರು. ಈ ಸಂದರ್ಭದಲ್ಲಿ ಸ್ಕಂದಶ್ರೀ ಸೇವಾ ಸಮಿತಿಯ ಅಧ್ಯಕ್ಷರಾದ ನವೀನ್, ಮಾಜಿ ಅಧ್ಯಕ್ಷರಾದ ಶೇಖರಶೆಟ್ಟಿಗಾರ್ ಹಾಗೂ ಪದಾಧಿಕಾರಿಗಳು ಸರ್ವಸದಸ್ಯರು ಮತ್ತು ಸೇರಿದ ಭಕ್ತಾದಿಗಳೆಲ್ಲರೂ ಉಪಸ್ಥಿತರಿದ್ದರು.
