ಮೂಡುಬಿದರೆ: ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದರೆ ಪ್ರೆಸ್ ಕ್ಲಬ್ ಇದರ 2015-16 ನೇ ಸಾಲಿನ ಅಧ್ಯಕ್ಷರಾಗಿ ಹೊಸದಿಗಂತದ ಪತ್ರಕರ್ತ ಎಂ.ಗಣೇಶ್ ಕಾಮತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರ ಪ್ರೆಸ್ ಕ್ಲಬ್ ನಲ್ಲಿ ನಿರ್ಗಮನ ಅಧ್ಯಕ್ಷ ಅಶ್ರಫ್ ವಾಲ್ಪಾಡಿ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
Ganesh Kamath M
ಉಪಾಧ್ಯಕ್ಷರಾಗಿ ಬಿ.ಸೀತಾರಾಮ ಆಚಾರ್ಯ (ವಿಜಯ ಕರ್ನಾಟಕ), ಕಾರ್ಯದರ್ಶಿಯಾಗಿ ಪ್ರಸನ್ನ ಹೆಗ್ಡೆ( ಪ್ರಜಾವಾಣಿ), ಸಂಘಟನಾ ಕಾರ್ಯದರ್ಶಿಯಾಗಿ ನವೀನ್ ಸಾಲ್ಯಾನ್ (ಜನಬಿಂಬ), ಕೋಶಾಧಿಕಾರಿಯಾಗಿ ಪ್ರೇಮಾಶ್ರೀ (ಸಂಯುಕ್ತ ಕರ್ನಾಟಕ) ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶ್ರಫ್ ವಾಲ್ಪಾಡಿ (ನಮ್ಮಬೆದ್ರ), ಧನಂಜಯ ಮೂಡುಬಿದರೆ (ಉದಯವಾಣಿ), ಯಶೋಧರ ವಿ.ಬಂಗೇರ (ವಿಜಯವಾಣಿ), ಜೈಸನ್ ತಾಕೋಡೆ( ಟೈಮ್ಸ್ ಆಫ್ ಬೆದ್ರ), ರಾಘವೇಂದ್ರ ಶೆಟ್ಟಿ (ನಮ್ಮ ಟಿ.ವಿ) ಆಯ್ಕೆಯಾಗಿದ್ದಾರೆ.
ನಿರ್ಗಮನ ಕಾರ್ಯದರ್ಶಿ ಜೈಸನ್ ತಾಕೋಡೆ ವರದಿ ವಾಚಿಸಿದರು. ಕೋಶಾಧಿಕಾರಿ ಪ್ರಸನ್ನ ಹೆಗ್ಡೆ ಲೆಕ್ಕಪತ್ರ ವಿವರ ಮಂಡಿಸಿದರು. ಬಿ. ಸೀತಾರಾಮ ಆಚಾರ್ಯ ಅವರನ್ನು 2014-15ನೇ ಸಾಲಿನ ಕ್ರಿಯಾಶೀಲ ಪತ್ರಕರ್ತ ಎಂದು ಗೌರವಿಸಲಾಯಿತು.

By suddi9

Leave a Reply

Your email address will not be published. Required fields are marked *