ಬಂಟ್ವಾಳ : ಈ ಹಿಂದೆ ಗ್ರಾಮದಲ್ಲಿ ಕೆಲವರು ಮಾತ್ರ ಹಕ್ಕುಪತ್ರ ಹೊಂದಿದವರಿದ್ದು ಕಾಂಗ್ರೆಸ್ ಸರಕಾರದ ಭೂಮಸೂದೆ ಕಾನೂನಿನಿಂದ ಇಂದು ಸಾವಿರಾರು ಜನರು ಭೂಮಾಲೀಕರಾಗಿದ್ದಾರೆ. ಸಿದ್ಧರಾಮಯ್ಯ ಅವರ ಸರಕಾರದ 94 ಸಿ ಕಾನೂನು ತಿದ್ದುಪಡಿ ತೀರ್ಮಾನದಿಂದ ಲಕ್ಷಾಂತರ ಮಂದಿಗೆ ನಿವೇಶನದ ಹಕ್ಕು ದೊರಕಿದೆ. ಪ್ರತೀ ಗ್ರಾಮದಲ್ಲಿ ಕನಿಷ್ಠ 2 ಎಕರೆ ಸ್ಥಳವನ್ನು ನಿವೇಶನಕ್ಕಾಗಿ ಮತ್ತು 2 ಎಕರೆ ಸ್ಥಳ ಸ್ಮಶಾನಕ್ಕೆ ಮೀಸಲಿರಿಸಲು ಸೂಚಿಸಲಾಗಿದೆ ಎಂದರು. ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಅವರು ಮಂಗಳವಾರ ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಗ್ರಾಮ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಿಲಾನ್ಯಾಸ, ಅಹವಾಲು ಸ್ವೀಕಾರ ಹಾಗೂ ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿ ಮಾತನಾಡಿದರು.


ಅವಕಾಶ ವಂಚಿತರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಆದ್ಯತೆ ನೀಡುವ ನಿಟ್ಟಿನಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ತನ್ನ ಸರಕಾರಗಳ ಮೂಲಕ ಹಲವಾರು ಯೋಜನೆಗಳನ್ನು ನೀಡಿದ್ದು, ಜನರ ಸಬಲೀಕರಣದಿಂದ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದವರು ಹೇಳಿದರು.
ಗ್ರಾ.ಪಂ.ಅಧ್ಯಕ್ಷ ಯಾಕೂಬ್ ಸಾಹೇಬ್, ತಾ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್, ಸಂಪತ್‍ಕುಮಾರ್ ಶೆಟ್ಟಿ , ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ತಹಶೀಲ್ದಾರ್ ಪುರಂದರ ಹೆಗ್ಡೆ , ವಲಯ ಅರಣ್ಯಾ„ಕಾರಿ ಸುಬ್ರಹ್ಮಣ್ಯ ರಾವ್, ಶ್ರೀ ಕ್ಷೇತ್ರ ಕಾರಿಂಜ ಮಾಜಿ ಅಡಳಿತ ಮೊಕ್ತೇಸರ ಪಿ.ಜಿನರಾಜ ಆರಿಗ, ಪ್ರಧಾನ ಮಂತ್ರಿ ಗ್ರಾಮಸಡಕ್ ಸಹಾಯಕ ಕಾರ್ಯನಿರ್ವಹಣಾ ಇಂಜಿನಿಯರ್ ಜಯಾನಂದ ಪೂಜಾರಿ, ಸಣ್ಣ ನೀರಾವರಿ ಸಹಾಯಕ ಕಾರ್ಯನಿರ್ವಹಣಾ ಇಂಜಿನಿಯರ್ ಷಣ್ಮುಗಮ್, ನಮ್ಮ ಗ್ರಾಮ ನಮ್ಮ ರಸ್ತೆ ಗುತ್ತಿಗೆದಾರ ಗಿರೀಶ್ ಗೌಡ, ಲೋಕೋಪಯೋಗಿ ಇಂಜಿನಿಯರಿಂಗ್ ವಿಭಾಗ ಇಂಜಿನಿಯರ್ ಉಮೇಶ್ ಭಟ್, ತಾ.ಪಂ.ಸಹಾಯಕ ನಿರ್ದೇಶಕಿ ದಯಾವತಿ, ಜಿ.ಪಂ.ಎಂಜಿನಿಯರ್ ನರೇಂದ್ರ ಬಾಬು, ಎಂಜಿನಿಯರ್ ಕೃಷ್ಣ , ಗ್ರಾಮಕರಣಿಕೆ ಆಶಾ ಮೆಹಂದಳೆ, ಗ್ರಾ.ಪ.ಉಪಾಧ್ಯಕ್ಷೆ ಸುನಂದ, ಕಾವಳಮೂಡೂರು ವ್ಯ.ಸೇ.ಸ.ಸಂಘದ ನಿರ್ದೇಶಕ ದಯಾನಂದ ಶೆಟ್ಟಿ ಅಮೈ , ಪಂ.ಅ.ಅಧಿಕಾರಿ ವಿವೇಕಾನಂದ, ಯೂಸುಫ್ ಕರಂದ್ಲಾಡಿ ಮತ್ತು ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು.
ಈ ವೇಳೆ ಸಚಿವರು ಕೈಲಾರು ಎಂಬಲ್ಲಿ ಪರಿಶಿಷ್ಟ ಜಾತಿ ಕಾಲನಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಂಬೆಡ್ಕರ್ ಭವನ, 2.68 ಕೋಟಿ ರೂ. ವೆಚ್ಚದ ಕಾರಿಂಜ – ನೆಲ್ಲಿಗುಡ್ಡೆ ರಸ್ತೆ ಅಭಿವೃದ್ಧಿ ಕಾಮಗಾರಿ, 30 ಲಕ್ಷ ರೂ. ವೆಚ್ಚದಲ್ಲಿ ಕಾಂದ್ರೋಡಿ ಎಂಬಲ್ಲಿ ನಿರ್ಮಾಣಗೊಳ್ಳಲಿರುವ ವೆಂಟೆಡ್ ಡ್ಯಾಂಗಳಿಗೆ ಶಿಲಾನ್ಯಾಸ ನೆರವೇರಿಸಿದರು. ತಲಾ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಾವಳಕಟ್ಟೆ – ಧೂಮಳಿಕೆ ಕಾಂಕ್ರೀಟ್ ರಸ್ತೆ, ನೆಲ್ಲಿಗುಡ್ಡೆ -ಕರೆಂಕಿಲ ಕಾಂಕ್ರೀಟ್ ರಸ್ತೆಗಳನ್ನು ಉದ್ಘಾಟಿಸಿದರು.
ಕೆದ್ದಳಿಕೆ ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ಕೆ.ರಮೇಶ್ ನಾಯಕ್ ಅವರು ಸ್ವಾಗತಿಸಿದರು. ಕಂದಾಯ ನಿರೀಕ್ಷಕ ಸಾಧು ಅವರು ಹಕ್ಕುಪತ್ರ ವಿತರಣಾ ಪಟ್ಟಿ ವಾಚಿಸಿದರು. ಕೆದ್ದಳಿಕೆ ಹಿ.ಪ್ರಾ.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿವಾಕರದಾಸ್ ವಂದಿಸಿದರು. ಶಿಕ್ಷಕ ಜಯರಾಮ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.





