ಬಂಟ್ವಾಳ: ನೇಪಾಳ ಭೂಕಂಪ ದುರಂತದ ನಿಧಿ ಸಂಗ್ರಹಕ್ಕಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಆಶ್ರಯದಲ್ಲಿ ಇಂದು (ಎ.29)ಅಪರಾಹ್ನ 3 ಗಂಟೆಯಿಂದ ಪಾದಯಾತ್ರೆ ನಡೆಯಲಿದೆ. ಬಿ.ಸಿ.ರೋಡಿನ ಪೊಳಲಿ ದ್ವಾರದಿಂದ ಹೊರಡುವ ಪಾದಯಾತ್ರೆಯಲ್ಲಿ ಪಕ್ಷದ ವಿವಿಧ ನಾಯಕರು ಭಾಗವಹಿಸಲಿದ್ದು, ಬಂಟ್ವಾಳ ಪೇಟೆವರೆಗೆ ನಡೆಯಲಿದೆ ಎಂದು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಜಿ.ಆನಂದ ತಿಳಿಸಿದ್ದಾರೆ.
