ಮೂಡುಬಿದಿರೆ : ಇಲ್ಲಿನ ಶೋರಿನ್-ರಿಯೂ ಕರಾಟೆ ಅಸೋಸಿಯೇಷನ್ ವತಿಯಿಂದ ತರಬೇತಿ ಪಡೆದು ಇದೀಗ ಮಲೇಶ್ಯಾದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್‍ಗೆ ಆಯ್ಕೆಯಾಗಿರುವ ಬಂಟ್ವಾಳ ವಾಮದಪದವಿನ ಬುರೂಜ್ ಆಂಗ್ಲ ಶಾಲೆಯ ವಿದ್ಯಾರ್ಥಿನಿ ಸೋನಿ ಶೆಟ್ಟಿಗೆ ಆಲಂಗಾರು ಪಂಡಿತ್ ರೆಸಾರ್ಟ್‍ನ ಮಾಲಕರಾದ ಲಾಲ್ ಗೋಯೆಲ್ ದಂಪತಿ 75,000 ದ ನೆರವನ್ನು ಸೋಮವಾರ ನೀಡಿದ್ದಾರೆ.

ಮೂಡುಬಿದಿರೆಯ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ ಅವರು ನೆರವು ನೀಡುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ದೀಪ ಬೆಳಗಿಸಿ ಉದ್ಘಾಟಿಸಿ ಕರಾಟೆ ಒಂದು ಆತ್ಮ ರಕ್ಷಣೆಯ ಕಲೆ. ಮಹಿಳೆಯರಿಗೆ ಕರಾಟೆ ಅಗತ್ಯವಾಗಿ ಬೇಕು. ಚೀನಾ, ಜಪಾನ್ ರಾಷ್ಟ್ರಗಳಲ್ಲಿ ಈ ಕರಾಟೆ ಕಲೆಗೆ ಪ್ರೊತ್ಸಾಹ ನೀಡುತ್ತಾರೆ. ಭಾರತದಲ್ಲಿ ಪ್ರೊತ್ಸಾಹ ಕಡಿಮೆ ಇದೆ ಇದ್ದರೂ ತಮಿಳುನಾಡಿನಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ.
ಓಲಂಪಿಕ್ ಕ್ರೀಡೆಗಳಲ್ಲಿ ಜುಡೋದಂತಹ ಕ್ರೀಡೆಗಳಿಗೆ ಅವಕಾಶವಿದೆ ಅದರಂತೆ ಕರಾಟೆಗೂ ಮಾನ್ಯತೆ ಸಿಗಬೇಕು ಹಾಗೂ ಸರಕಾರಗಳು ಕರಾಟೆಗೆ ಆದ್ಯತೆಯನ್ನು ನೀಡಬೇಕು. ಎಂದು ಹೇಳಿದ ಅವರು ಮಲ್ಯೇಶಾದಲ್ಲಿ ಸ್ಪರ್ಧಿಸಲು ಹೋಗುತ್ತಿರುವ ಸೋನಿ ಶೆಟ್ಟಿ ಜಯಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಳ್ಳುವ ಮೂಲಕ ದೇಶದ ಕೀರ್ತಿಗೆ ಪಾತ್ರರಾಗಲಿ ಎಂದು ಶುಭ ಹಾರೈಸಿದರು.
ಆಲಂಗಾರು ಹೋಲಿ ರೋಜರಿ ಚರ್ಚಿನ ಧರ್ಮಗುರು ಬೇಸಿಲ್ ವಾಸ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗೋಯೆಲ್ ಅವರು ಉತ್ತಮ ವ್ಯಕ್ತಿ ಹಲವು ಜನ ಸಾಧಕರನ್ನು ಈಗಾಗಲೇ ಗುರುತಿಸಿ ಗೌರವಿಸಿದ್ದಾರೆ ಇದೀಗ ನೆರವು ನೀಡುವ ಮೂಲಕ ಕರಾಟೆ ಪಟುವನ್ನು ಪ್ರೋತ್ಸಾಹಿಸಿದ್ದಾರೆ ಎಂದು ಅವರು ಸೋನಿ ಶೆಟ್ಟಿಗೆ ಶುಭ ಹಾರೈಸಿದರು.
ಪಂಡಿತ್ ರೆಸಾರ್ಟ್‍ನ ರಜನಿ ಗೋಯೆಲ್, ಮಂಗಳೂರು ಕಾರ್ಪೋರೇಷನ್ ಬ್ಯಾಂಕಿನ ಜನರಲ್ ಮೆನೇಜರ್ ಪಿ.ಶಿವಸುಬ್ರಹ್ಮಣ್ಯಂ,ಆಕ್ಸಿಸ್ ಬ್ಯಾಂಕ್‍ನ ರಮನಾಥ್, ಎನ್.ಪ್ರಕಾಶ್, ಉದ್ಯಮಿ ಅಬುಲಾಲ್ ಪುತ್ತಿಗೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಸಿಬಂದಿ ಮುಸ್ತಾಕ್, ಸೋನಿ ಶೆಟ್ಟಿಯ ತಾಯಿ ಅಶ್ವಿನಿ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶೋರಿನ್-ರಿಯೂ ಕರಾಟೆ ಅಸೋಸಿಯೇಶನ್‍ನ ಮುಖ್ಯಸ್ಥ, ಕರಾಟೆ ಶಿಕ್ಷಕ ನದೀಮ್ ಪ್ರಾಸ್ತಾವಿಕವಾಗಿ ಮಾತನಾಡಿ ಮಲೇಶ್ಯಾದಲ್ಲಿ ನಡೆಯುವ ಕರಾಟೆ ಚಾಂಪಿಯನ್ ಶಿಪ್‍ಗೆ ಶೋರಿನ್-ರಿಯೂ ಕರಾಟೆ ಅಸೋಸಿಯೇಶನ್‍ನಿಂದ ನಾಲ್ಕು ಜನ ಕರಾಟೆ ಪಟುಗಳು ಸ್ಪರ್ಧಿಸಲಿದ್ದಾರೆ. ಕರಾಟೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಸಾಧನೆಯನ್ನು ಮಾಡುತ್ತಿದ್ದಾರೆ ಆದರೆ ಸ್ಪರ್ಧಿಸಲು ದೂರದೂರುಗಳಿಗೆ ಹೋಗಲು ಖರ್ಚೆವೆಚ್ಚದ ಸಮಸ್ಯೆ ಇದೆ ಪ್ರೋತ್ಹಾಕರು ಸಿಕ್ಕದರೆ ಮಾತ್ರ ಕರಾಟೆ ಪಡುಗಳು ಸಾಧನೆ ಮಾಡಲು ಸಾಧ್ಯವಿದೆ. ಮಲೇಶ್ಯಾದಲ್ಲಿ ಸ್ಪರ್ಧಿಸಲು ಸೋನಿ ಶೆಟ್ಟಿಗೆ ಪ್ರೋತ್ಸಾಹಕರ ಕೊರತೆ ಇತ್ತು ಆದರೆ ಇದೀಗ ಗೋಯೆಲ್ ಅವರೇ ಸ್ವತ: ತನ್ನನ್ನು ಸಂಪರ್ಕಿಸಿ ಸೋನಿ ಶೆಟ್ಟಿಗೆ ನೆರವನ್ನು ನೀಡುವುದಾಗಿ ಹೇಳಿದ್ದರು ಇದೀಗ ನೆರವನ್ನು ನೀಡಿದ್ದಾರೆಂದು ಹೇಳಿ ಗೋಯೆಲ್ ದಂಪತಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ತನ್ನ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಿರುವುದಕ್ಕೆ ಪಂಡಿತ್ ರೆಸಾರ್ಟ್‍ನ ಮಾಲಕರಿಗೆ ಸೋನಿ ಶೆಟ್ಟಿ ಕೃತಜ್ಞತೆ ಸಲ್ಲಿಸಿದರು.
ಪಂಡಿತ್‍ನ ಗ್ರೇಸಿ ಡಿಸೋಜಾ ಮತ್ತು ರೀಟಾ ಡೇಸಾ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಲಾಲ್ ಗೋಯೆಲ್ ವಂದಿಸಿದರು.
