ಬಂಟ್ವಾಳ : ತಾಲೂಕು ಉಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರಿಂದ ಎ.25 ಶನಿವಾರ ಗ್ರಾಮಭೇಟಿ ಕಾರ್ಯಕ್ರಮ ಜರಗಿತು.ಈ ವೇಳೆ ಅವರು ಒಟ್ಟು 95 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು.
pkt 2
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರಕಾರಿ ಜಾಗದಲ್ಲಿ ಮನೆಕಟ್ಟಿ ವಾಸಿಸುತ್ತಿರುವವರಿಗೆ 94ಸಿ ಯಲ್ಲಿ ಶೀಘ್ರ ಹಕ್ಕುಪತ್ರ ವಿತರಿಸಲಾಗುವುದು ಎಂದು ಹೇಳಿದರು. ಹಿಂದೆ ಉದಯವಾಣಿ ಪತ್ರಿಕೆಯ ಮೂಲಕ ಕುಗ್ರಾಮವೆಂದು ಗುರುತಿಸಲ್ಪಟ್ಟ ಉಳಿ ಗ್ರಾಮ ಇಂದು ಹೆಚ್ಚಿನ ಅಭಿವೃದ್ಧಿ ಸಾ„ಸಿದೆ. ಮೂಲಭೂತ ಸೌಕರ್ಯಗಳಾದ ನೀರು, ರಸ್ತೆ, ವಿದ್ಯುತ್ ಸವಲತ್ತುಗಳ ಜೊತೆಗೆ ಶಿಕ್ಷಣ, ಬ್ಯಾಂಕಿಂಗ್, ಸಹಕಾರಿ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಹೊಂದಿದೆ. ಕಳೆದ 20 ವರ್ಷಗಳಲ್ಲಿ ಗ್ರಾಮಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು. ವಗ್ಗ-ಉಳಿ ರಸ್ತೆಯನ್ನು ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುವುದು ಎಂದರು.
ಈ ವೇಳೆ ಅವರು ಬೋಳ್ಯ- ಪುಲ್ಲೇರಿಯಲ್ಲಿ ನೀರು ಸರಬರಾಜು ಸೌಲಭ್ಯ ಹಾಗೂ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು. ಮಲ್ಲೇರಿ-ಬಳ್ಳಿ ರಸ್ತೆ , ಕಕ್ಯ – ಊರಿಂಜ ರಸ್ತೆ ,ಗಾಣದಕೊಟ್ಯ- ಅಂತರ ರಸ್ತೆ , ಲಿಂಗೊಟ್ಟು ರಸ್ತೆ , ಕೇವಾಜೆ-ಕೊಂಗುಜೆ ರಸ್ತೆ , ಉರ್ಕಿ ರಸ್ತೆ , ಕಕ್ಯ- ಆಯರ್‍ಮಾರ್ ರಸ್ತೆ , ಮೇಗಿನಅಗ್ಪಲ , ಕೆಳಗಿನ ಅಗ್ಪಲ ರಸ್ತೆ, ಮೈರ ರಸ್ತೆ , ಮಾರೋಡಿ – ಬಿತ್ತ ರಸ್ತೆ, ಗುಡ್ಡಬೆಟ್ಟು ರಸ್ತೆ , ಅಭಿವೃದ್ಧಿಗೊಂಡ ಉಳಿಬೈಲು ಅಂಗನವಾಡಿ ಕೇಂದ್ರ , ಗುಡ್ಡಬೆಟ್ಟು ಅಂಗನವಾಡಿ ಕೇಂದ್ರ , ಬೋಳ್ಯ ಅಂಗನವಾಡಿ ಕೇಂದ್ರಗಳನ್ನು ಉದ್ಘಾಟಿಸಿದರು.
ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲಿಯಾನ್, ಅರಣ್ಯಾ„ಕಾರಿ ಸುಬ್ರಹ್ಮಣ್ಯ ರಾವ್, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ತಾ.ಪಂ.ಕಾರ್ಯನಿರ್ವಹಣಾ„ಕಾರಿ ಸಿಪ್ರಿಯನ್ ಮಿರಾಂದ, ಸದಸ್ಯರಾದ ಬಿ.ಪದ್ಮಶೇಖರ ಜೈನ್, ಸಂಪತ್‍ಕುಮಾರ್ ಶೆಟ್ಟಿ , ಗ್ರಾ.ಪಂ.ಉಪಾಧ್ಯಕ್ಷೆ ಕಮಲಾಕ್ಷಿ , ಸದಸ್ಯರಾದ ಅಬ್ದುಲ್ ರಹಿಮಾನ್, ಸಂಜೀವ ಗೌಡ ಅಗ್ಪಲ, ಸಂಜೀವ ಶೆಟ್ಟಿ , ವೀರೇಂದ್ರ ಕುಮಾರ್ ಜೈನ್, ಪ್ರಮುಖರಾದ ವಿಶ್ವನಾಥ ಸಾಲಿಯಾನ್ ಬಿತ್ತ , ಇಂಜಿನಿಯರ್‍ಗಳಾದ ಕೃಷ್ಣ , ನರೇಂದ್ರಬಾಬು ಮತ್ತಿತರರು ಉಪಸ್ಥಿತರಿದ್ದರು.
ಗ್ರಾ.ಪಂ.ಅಧ್ಯಕ್ಷ ಎ.ಚೆನ್ನಪ್ಪ ಸಾಲಿಯಾನ್ ಅವರು ಸ್ವಾಗತಿಸಿದರು. ಪಂ.ಅ.ಅಬಕಾರಿ ಶ್ರೀಧರ್ ವಂದಿಸಿದರು.

By suddi9

Leave a Reply

Your email address will not be published. Required fields are marked *