ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಮೊಬೈಲ್ ಅಂಗಡಿ ಮತ್ತು ಸೆಲೂನ್‍ಗೆ ಭಾನುವಾರ ತಡರಾತ್ರಿ ಕಳ್ಳರು ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ.
ಮೆಲ್ಕಾರ್ ಪೇಟೆಯಲ್ಲಿ ಸಜಿಪ ನಿವಾಸಿ ಪ್ರದೀಪ ಎಂಬವರು ನಡೆಸುತ್ತಿರುವ ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳರು ಕೆಲವೊಂದು ಸಾಮಾಗ್ರಿಗಳನ್ನು ಮಾತ್ರ ಕಳವು ಮಾಡುವಲ್ಲಿ ಯಶಸ್ವಿಯಾಗಿದ್ದು, ಉಳಿದಂತೆ ಮೊಬೈಲ್ ಕಳವಿಗೆ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಇಲ್ಲಿನ ಉಷಾ ಹೇರ್ ಡ್ರೆಸರ್ಸ್ ಎಂಬ ಸೆಲೂನ್‍ಗೆ ಶಟರ್ ಬಾಗಿಲಿನ ಚಿಲಕ ಮುರಿದು ಒಳ ನುಗ್ಗಿದ ಕಳ್ಳರಿಗೆ ಅಲ್ಲಿಯೂ ಏನೂ ದೊರೆತಿಲ್ಲ. ಕಳೆದ ವರ್ಷವೂ ಇಲ್ಲಿನ ವಾಣಿಜ್ಯ ಸಂಕೀರ್ಣವೊಂದರಲ್ಲಿ ಸರಣಿ ಕಳವು ನಡೆದಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *