ಬಂಟ್ವಾಳ:ಆರ್ಥಿಕ ಸಂಪತ್ತು ಕ್ರೋಢೀಕರಣದ ಜೊತೆಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಂತಹ ಸಮಾಜಮುಖಿ ಸೇವೆಯಿಂದ ದೇವರಿಂದಲೂ ಮೆಚ್ಚುಗೆ ದೊರೆಯುತ್ತದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ತಾಲ್ಲೂಕಿನ ಫರಂಗಿಪೇಟೆ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿ ಮತ್ತು ಖಿದ್‍ಮತುಲ್ ಇಸ್ಲಾಂ ಎಸೋಸಿಯೇಶನ್ ವತಿಯಿಂದ ಭಾನುವಾರ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಸೀದಿ ಅಧ್ಯಕ್ಷ ಎಫ್.ಮುಹಮ್ಮದ್ ಬಾವಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಣ್ಣೂರು ಮುದರ್ರಿಸ್ ಶೈಖುನಾ ಸೈಯ್ಯದ್ ಜೈನುಲ್ ಅಬಿದಿನ್ ಜಿಫ್ರಿ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ‘ನಿಖಾಹ್’ ನೆರವೇರಿಸಿದರು.
ಮೂಡಾ ಆಯುಕ್ತ ಮಹಮ್ಮದ್ ನಝೀರ್, ಫರಂಗಿಪೇಟೆ ಜುಮ್ಮಾ ಮಸೀದಿ ಮುದರೀಸ್ ಉಸ್ಮಾನ್ ದಾರಿಮಿ, ಮಾಹಿನ್ ದಾರಿಮ್ ಪಾತೂರು, ಎ.ಯೂಸುಫ್ ಅಲಂಕಾರ್, ಅಬ್ದುಲ್ ಮಜೀದ್ ಸೌದಿ ಅರೇಬಿಯಾ, ಹಿದಾಯ ಫೌಂಡೇಂಶನ್ ಕಾರ್ಯದರ್ಶಿ ಹನೀಫ್ ಗೋಳ್ತಮಜಲು, ಅಬೀದ್ ಆಲಿ, ಅಲ್ತಾಫ್ ಹುಸೈನ್ ಬಹರೈನ್, ಅಮ್ಮೆಮ್ಮಾರ್ ಜುಮ್ಮಾ ಮಸೀದಿ ಅಧ್ಯಕ್ಷ ಉಮರಬ್ಬ, ಅರ್ಕುಳ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಸತ್ತಾರ್, ಸುಜೀರ್ ಮಲ್ಲಿ ಹೈದ್ರೊಶಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಸಲಾಂ, ಪ್ರಮುಖರಾದ ನೌಶಾದ್ ಹಾಜಿ, ಸಿದ್ದೀಕ್ ದಾರಿಮಿ ಕಡಬ, ಮಹಮ್ಮದ್ ಬದ್ರುದ್ದೀನ್, ಅರಫಾ ಗ್ರೂಫ್ ನ ಅಬ್ದುಲ್ ಲತೀಫ್, ಅಹಮದ್ ಬಾವಾ ಉಪ್ಪಿನಂಗಡಿ, ರಝಾಕ್ ಅಮ್ಮೆಮ್ಮಾರ್, ಎಫ್.ಎಂ. ಬಶೀರ್, ಸಲೀಂ ಟೈಲರ್, ತಾ.ಪಂ. ಸದಸ್ಯ ಆಸಿಫ್ ಇಕ್ಬಾಲ್, ಫರಂಗಿ ಪೇಟೆ ಜುಮ್ಮಾ ಮಸೀದಿ ಉಪಾಧ್ಯಕ್ಷ ಇಬ್ರಾಹಿಂ ಕುಂಪಣಮಜಲು, ಖಜಾಂಜಿ ಮಜೀದ್ ಮತ್ತಿತರರು ಇದ್ದರು.

26btl-farngipete

IMG_3039

IMG_3108
ಮಸೀದಿ ಕಾರ್ಯದರ್ಶಿ ಉಮ್ಮರ್ ಫಾರೂಕ್ ಸ್ವಾಗತಿಸಿ, ಸಲೀಂ ಅಲ್ತಾಫ್ ದುಬೈ ಪ್ರಾಸ್ತಾವಿಕ ಮಾತನಾಡಿದರು. ಗ್ರಾ.ಪಂ.ಸದಸ್ಯ ಖಾದರ್ ವಂದಿಸಿದರು.
ಶಿಕ್ಷಕ ರಝಾಕ್ ಅನಂತಾಡಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು, ಗ್ರಾ.ಪಂ. ಉಪಾಧ್ಯಕ್ಷ ಮಹಮ್ಮದ್ ಶರೀಫ್ ಕಾರ್ಯಕ್ರಮ ನಿರೂಪಿಸಿದರು.
ಹತ್ತು ಜೋಡಿ ದಾಂಪತ್ಯ ಜೀವನಕ್ಕೆ..
ಬೆಂಗ್ರೆ ಕಸ್ಬಾ ಮುಹಮ್ಮದ್ ಸಫ್ವಾನ್- ವಳಚ್ಚಿಲ್ ಪದವಿನ ಮುನೀರಾ, ಮೋಂಟುಗೋಳಿ ಮುಹಮ್ಮದ್ ಅಶ್ರಫ್- ಬಜಾಲ್ ಕಟ್ಟೆಯ ಶಮೀಲಾ, ಕಾಣಿಯೂರಿನ ನಾಸಿರ್- ಮಂಜನಾಡಿ ಸುಮಯ್ಯಾ, ಆತೂರು ಕೊೈಲ ಮುಸ್ತಫಾ- ಕಾವಳಕಟ್ಟೆ ಸಾಬಿರಾ, ಕುಂಬ್ರ ಅಬ್ದುಲ್ ಆಸಿಫ್- ಕಬಕ ವಿದ್ಯಾಪುರ ರೆಹಮತ್, ಕಾರ್ಕಳ ಶೇಕ್ ಇರ್ಫಾನ್-ಕಾರ್ಕಳ ಸಂಶೀರಾ ಬಾನು, ಭದ್ರಾವತಿ ಮುಹಮ್ಮದ್- ಉಜಿರೆ ಅತ್ತಾಜೆ ಝೀನತ್, ಮಂಜನಾಡಿ ಇಮ್ತಿಯಾಝ್-ಪದ್ಮುಂಜ ಅನ್ಸೀರಾ, ಕಾವಳಕಟ್ಟೆ ಹಝಮ್-ಬೆಳ್ತಂಗಡಿ ಪುದುವೆಟ್ಟು ಖುರ್ಷಿದಾ ಭಾನು, ಕೊೈಲ ಅನ್ಸಾರ್ -ಜೈನಬು ದಾಂಪತ್ಯ ಜೀವನಕ್ಕೆ ಹೆಜ್ಜೆಯಿಟ್ಟರು. ವರನಿಗೆ ವಾಚ್, ಹೊಸ ವಸ್ತ್ರ, ವಧುವಿಗೆ ವಸ್ತ್ರ್ತ-ವಾಚ್, ಬುರ್ಖಾಕ್ಕೆ ರೂ 25 ಸಾವಿರನಗದು ಮತ್ತು 5 ಪವನ್ ಚಿನ್ನ ವಿತರಣೆ ನಡೆಯಿತು.

By suddi9

Leave a Reply

Your email address will not be published. Required fields are marked *